Header Ads
Header Ads
Breaking News

ಉಡುಪಿಯಲ್ಲಿ ರೆಡ್‌ಎಫ್‌ಎಂ ಸಂಗೀತೋತ್ಸವ. ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಕಾರ್ಯಕ್ರಮ.

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಭಾರ್ಗವಿ ಡ್ಯಾನ್ಸ್ ಅಕಾಡೆಮಿ ಸಹಕಾರದೊಂದಿಗೆ ರೆಡ್ ಎಫ್ ಎಂ 92.5 ರೇಡಿಯೋ ಸಂಸ್ಥೆ ಆಯೋಜಿಸಿದ ಸಂಗೀತೋತ್ಸವವು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಹೆಸರಾಂತ ಗಾಯಕಿ ಎಂ ಡಿ ಪಲ್ಲವಿ ಮತ್ತು ಪ್ರಸಿದ್ಧ ಹಿನ್ನೆಲೆ ಗಾಯಕ ಅಜಯ್ ವಾರಿಯರ್ ಅವರು ಭಕ್ತಿ ಗೀತೆ ಮತ್ತು ಭಾವಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸಾವಿರಾರು ಸಂಗೀತ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೆಡ್ ಎಫ್ ಎಮ್ ನ ರೇಡಿಯೋ ಜಾಕಿಗಳಾದ ಆರ್ ಜೆ ರಶ್ಮಿ,ಆರ್ ಜೆ ನಯನ ಮತ್ತು ಆರ್ ಜೆ ಪ್ರಸನ್ನ ಮತ್ತು ಭಾರ್ಗವಿ ನೃತ್ಯ ತಂಡದ ವ್ಯವಸ್ಥಾಪಕರು ,ತಂಡದ ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply