Header Ads
Header Ads
Header Ads
Breaking News

ಉಡುಪಿಯಲ್ಲಿ ರೆಡ್ ಎಫ಼್.ಎಂ ರೆಡ್ ರಥ ದಸರಾ ಹಬ್ಬದ ಹಿನ್ನಲೆಯಲ್ಲಿ ಸಂಚಾರ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಜನಾಭಿಪ್ರಾಯ

ಮಂಗಳೂರಿನ ಪ್ರಸಿದ್ದ ರೇಡಿಯಾ ಸ್ಟೇಶನ್ ರೆಡ್ ಎಫ಼್.ಎಂ ದಸರಾ ಹಬ್ಬದ ಪ್ರಯುಕ್ತ ರೆಡ್ ರಥ ಹಮ್ಮಿಕೊಂಡಿದ್ದು ಇಂದು ಉಡುಪಿಗೆ ಆಗಮಿಸಿ ಜನಾಭಿಪ್ರಾಯ ನಡೆಸಿತು.

ಕಳೆದ ಐದು ವರ್ಷಗಳಿಂದ ರೆಡ್ ರಥದ ಮೂಲಕ ರೆಡ್ ಎಫ಼್.ಎಂ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು ಎರಡನೇ ವರ್ಷ ಉಡುಪಿಗೆ ಆಗಮಿಸುತ್ತಿದೆ. ಕಳೆದ ವರ್ಷಕೂಡಾ ಉಡುಪಿಗೆ ಬಂದು ದಸರಾ ಹಬ್ಬದ ವಿಶೇಷತೆಗಳ ಜನಾಭಿಪ್ರಾಯ ನಡೆಸಿತ್ತು. ಇಂದು ಉಡುಪಿಯ ಸಮ್ಸ್ಕೃತ ಕಾಲೇಜಿನಲ್ಲಿ ನಡೆಯುತ್ತಿರುವ ದಸರಾ ಸಂಭ್ರಮದ ಹಿನ್ನಲೆಯಲ್ಲಿ ಅಲ್ಲಿನ ಧಾರ್ಮಿಕ ಮುಖಂದರು, ಸಮಾಜಿಕ ಕಾರ್ಯಕರ್ತರು, ಮಕ್ಕಳೊಂದಿಗೆ ಜನಾಭಿಪ್ರಾಯ, ಹಬ್ಬದ ಸಂಭ್ರಮದ ಅಭಿಪ್ರಾಯಗಳನ್ನು ಪಡೆದುಕೊಂಡರು.

ಆರ್.ಜೆ ಪ್ರಸನ್ನ ನೇತೃತ್ವದ ತಂಡದಲ್ಲಿ ಸ್ಟೇಶನ್ ಹೆಡ್ ಶೋಭಿತ್ ಶೆಟ್ಟಿ, ಆರ್.ಜೆ ರಶ್ಮಿ, ಆರ್.ಜೆ ತ್ರಿಶೂಲ್, ಅರ್.ಜೆ ನಯನ, ಅಶ್ವಿನ್ ಉಪಸ್ಥಿತರಿದ್ದರು. ಉಡುಪಿ ಬಳಿಕ ಕುಂದಾಪುರದಲ್ಲೂ ರೆಡ್ ರಥ ಸಂಚರಿಸಿ ಕಾರ್ಯಕ್ರಮ ಹಮ್ಮಿಕೊಂಡಿತು.

ವರದಿ:ಪಲ್ಲವಿ ಸಂತೊಷ್

Related posts

Leave a Reply