Header Ads
Breaking News

ಉಡುಪಿಯಲ್ಲಿ ರೈತ ಸಮಾವೇಶ-2020 : ಫೆಬ್ರವರಿ 23ರಂದು ನಡೆಯಲಿರುವ ಸಮಾವೇಶ

ನಗರಗಳಲ್ಲದೆ ಹಳ್ಳಿಗಳಲ್ಲಿ ಕೂಡಾ ಕೃಷಿಯಿಂದ ವಿಮುಖವಾಗುತ್ತಿರುವ ಕೃಷಿಕರಿಗೆ ಹಾಗೂ ಕೃಷಿ ಆಸಕ್ತರಿಗೆ ಕಡಿಮೆ ಖರ್ಚಿನಲ್ಲಿ ಸುಲಭದ ಕೃಷಿ, ಹೈನುಗಾರಿಕೆ, ವಿಭಿನ್ನ ಕೃಷಿ ಬೆಳೆಗಳು, ಯಾಂತ್ರೀಕರಣ ವಿಷಯಗಳನ್ನು,ಜಿಲ್ಲೆಯಲ್ಲಿ ಗ್ರಾಮ ಸಮಿತಿಗಳ ಮೂಲಕ ಕೃಷಿ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ಮಾರ್ಗದರ್ಶನ ನೀಡುತ್ತಿರುವ ಉಡುಪಿ ಜಿಲ್ಲಾ ಕೃಷಿಕ ಸಂಘವು ಫೆಬ್ರವರಿ 23ರಂದು ಜಿಲ್ಲಾ ರೈತ ಸಮಾವೇಶ-2020ನ್ನು ಆಯೋಜಿಸಿದೆ.

ಉಡುಪಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶರ್ಮ ಬಂಟಕಲ್ಲು ಅವರು, ಇದರ ಉದ್ಘಾಟನೆಯು ಅದೇ ದಿನ ಮುಂಜಾನೆ 9.30ಕ್ಕೆ ಉಡುಪಿ ಕುಂಜಿಬೆಟ್ಟುವಿನ ಶಾರದ ಮಂಟಪದಲ್ಲಿ ಮುಜರಾಯಿ ಮೀನುಗಾರಿಕೆ,ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಖ್ಯಾತ ಚಿಂತಕ ಮುನಿರಾಜ ರೆಂಜಾಳ ದಿಕ್ಸೂಚಿ ಭಾಷಣ ಗೈಯಲಿದ್ದಾರೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು ಅಪರಾಹ್ನ 12ರಿಂದ ವಿವಿಧ ಕೃಷಿ ಸಂಬಂದಿತ ವಿಚಾರಗೋಷ್ಠಿಗಳು ನಡೆಯಲಿವೆ, ಈ ಸಂದರ್ಭದಲ್ಲಿ ಕೃಷಿ ತಜ್ಞರು ಮತ್ತು ವಿಜ್ಞಾನಿಗಳಿಂದ ಕೃಷಿಯಲ್ಲಿ ನೀರಿನ ನಿರ್ವಹಣೆ ಸೇರಿದಂತೆ ಜೈವಿಕ ಗೊಬ್ಬರಗಳ ಬಳಕೆ, ಆಹಾರದಿಂದ ಆರೋಗ್ಯ ರಕ್ಷಣೆ ಮತ್ತಿತರ ವಿಚಾರವಾಗಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಈ ರೈತ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೃಷಿ ಸಾಧನೆ ಮಾಡಿದ ಆರು ಮಂದಿ ಕೃಷಿಕರನ್ನು ಸನ್ಮಾನಿಸಲಾಗುವುದು ಎಂದರು.ಸುದ್ದಿಗೋಷ್ಟಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭತ್, ಉಪಧ್ಯಕ್ಷರುಗಳಾದ ಶ್ರೀನಿವಾಸ ಬಲ್ಲಾಳ್, ದಿನೇಶ್ ಶೆಟ್ಟಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *