Header Ads
Breaking News

ಉಡುಪಿಯಲ್ಲಿ ವಾರ್ತಾ ಇಲಾಖೆಯ ಸಹಯೋಗದಲ್ಲಿ ಡಾ.ರಾಜ್ ಕುಮಾರ್ ಜಯಂತಿ ಕಾರ್ಯಕ್ರಮ

ಉಡುಪಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದರ ಸಹಯೋಗದಲ್ಲಿ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ಡಾ. ರಾಜ್ ಕುಮಾರ್ ಜಯಂತಿ ಆಚರಿಸಲಾಯಿತು. ಉಡುಪಿಯ ತಹಶೀಲ್ಧಾರ್ ದಯಾನಂದ ಕುರ್ಡೇಕರ್ ರಾಜ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ರಾಜ್ ಜಯಂತಿ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ರಾಜ್ ಕುಮಾರ್ ಮೇರು ವ್ಯಕ್ತಿತ್ವದ ನಟ. ಅವರ ಕಾಲದಲ್ಲಿ ನೋಡಲು ಸಿಗುತ್ತಿದ್ದ ಸಾಂಸಾರಿಕ ಚಿತ್ರಗಳು , ಉತ್ತಮ ಚಿತ್ರಗಳು ಈ ಕಾಣಲು ಸಿಗುತ್ತಿಲ್ಲ. ಎಲ್ಲಾ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಏಕೈಕ ನಟರಿದ್ದರೆ ಅದು ರಾಜ್ ಕುಮಾರ್. ಸರಳ, ಸಜ್ಜನಿಕೆ ಜೊತೆಗೆ ಕನ್ನಡ ಬಾಷೆಗೆ , ಭಾಷಾ ಅಭಿವೃದ್ದಿಗೆ ರಾಜ್ ಕುಮಾರ್ ಕೊಡುಗೆ ಅಪಾರವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ ರಾಜ್ ಕುಮಾರ್ ಒಡನಾಡಿ ದಯಾನಂದ ಶೆಟ್ಟಿ ಹೇರೂರು,ಸಿನಿಮಾ ಪತ್ರಕರ್ತ, ವಿಮರ್ಷಕ ಉದಯ್ ಕುಮಾರ್ ಪೈ, ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *