Header Ads
Header Ads
Breaking News

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಹಾಲು, ನೀರಿನ ಅಭಿಷೇಕದ ಮೂಲಕ ಶ್ರೀಕೃಷ್ಣನಿಗೆ ಸ್ವಾಗತ

 ಉಡುಪಿಯಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಸಡಗರ. ಶ್ರೀ ಕೃಷ್ಣನ ಜನ್ಮಾಷ್ಟಮಿಯನ್ನ ನಿನ್ನೆ ದಿನವಿಡೀ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥ ಸ್ವಾಮೀಜಿ, ರಾತ್ರಿ 12:12ಕ್ಕೆ ಕೃಷ್ಣ ಗುಡಿಯ ಪಕ್ಕದಲ್ಲಿದ್ದ ತುಳಸಿಗೆ ಶಂಖದ ಮೂಲಕ ನೀರು ಹಾಗೂ ಹಾಲು ಸಮರ್ಪಿಸುವ ಮೂಲಕ ಚಂದ್ರನಿಗೆ ಅಘ್ರ್ಯ ಸಮರ್ಪಿಸಿದ್ರು.

ಚಂದ್ರನಿಗೆ ಅಘ್ರ್ಯ ಸಮರ್ಪಿಸಿದ ಬಳಿಕ ಕೃಷ್ಣನ ಮೂರ್ತಿಗೆ ಹಾಲು, ನೀರಿನ ಮೂಲಕ ಅಘ್ರ್ಯ ಸಮರ್ಪಿಸಿ ಉಂಡೆ ಚಕ್ಕುಲಿ ನೈವೇಧ್ಯ ಮಾಡಿ ಮಹಾಮಂಗಳಾರತಿ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿಯನ್ನ ಆಚರಿಸಿದ್ರು. ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಈಶಪ್ರಿಯ ಸ್ವಾಮೀಜಿ ಕೂಡ ಚಂದ್ರನಿಗೆ ಶಂಖದಿಂದ ಹಾಲು ಹಾಗೂ ನೀರಿನಿಂದ ಅಘ್ರ್ಯ ಸಮರ್ಪಿಸಿದ್ರು. ಇದೇ ವೇಳೆ ಶ್ರೀಗಳ ಅಘ್ರ್ಯ ಸಮರ್ಪಣೆ ಬಳಿಕ ದಿನವಿಡೀ ಉಪವಾಸದಲ್ಲಿದ್ದ ಭಕ್ತ ಸಮೂಹ ಕೃಷ್ಣನ ಗುಡಿಯ ಎದುರು ಸಾಮೂಹಿಕವಾಗಿ ನೀರಿನಿಂದ ಅಘ್ರ್ಯ ಸಮರ್ಪಿಸಿ ಪುನೀತರಾದರು.

Related posts

Leave a Reply

Your email address will not be published. Required fields are marked *