Header Ads
Header Ads
Breaking News

ಉಡುಪಿಯಲ್ಲಿ ಸಂಭ್ರಮದ ಹೊಸ ವರ್ಷ:ಪ್ರಮುಖ ಹೊಟೇಲ್‌ಗಳಲ್ಲಿ ಡಿಜೆ ನೈಟ್,ಪಾರ್ಟಿ.

ಉಡುಪಿಯ ಪ್ರಮುಖ ಹೊಟೇಲ್ ಗಳಲ್ಲಿ ಹೊಸ ವರ್ಷದ ಆಚರಣೆ ಅದ್ದೂರಿಯಾಗಿ ನಡೆಯಿತು. ಅದರಲ್ಲೂ ಕಡಿಯಾಳಿಯಲ್ಲಿರುವ ಓಶನ್ ಪರ್ಲ್ ಹೊಟೇಲ್ ನಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆಯಿಂದಲೇ ಸಾಕಷ್ಟು ಜನ ಆಗಮಿಸಿ ಹೊಸ ವರ್ಷಾಚರಣೆಯನ್ನ ಆಗಮಿಸಿದರು. ಎಲ್ಲರಿಗೂ ರುಚಿಕರವಾದ ಖ್ಯಾದ್ಯಗಳನ್ನು ಉಣಬಡಿಸಲಾಯಿತು.ಗ್ರಾಹಕರ ಬೇಡಿಕೆಯ ಅನುಗುಣವಾಗಿ ಮದ್ಯ ಪೂರೈಕೆಯೂ ಉತ್ತಮ ರೀತಿಯಲ್ಲಿ ನಡೆಯಿತು.ಡಿಜೆ ರೋಶ್ ಅವರ ಡಿಜೆ ಸಂಗೀತಕ್ಕೆ ನೆರದವರು ಸ್ಟೆಪ್ ಹಾಕಿದರು. ಅನೇಕ ಸಾಂಸ್ಕೃತಿಕ, ಸ್ಪರ್ದಾ ಕಾರ್ಯಕ್ರಮಗಳು ಕೂಡಾ ಆಯೋಜಿಸಲಾಗಿತ್ತು. ಎರೋಲ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.ಸರಿಯಾಗಿ 12ಗಂಟೆಗೆ ನೂತನ ವರ್ಷವನ್ನು ಕುಣಿದು ಕುಪ್ಪಳಿಸುವ ಮೂಲಕ ಬರಮಾಡಿಕೊಂಡರು..ಹೊಟೇಲ್ ನ ಮ್ಯಾನೇಜರ್ ಬಿಜು ವರ್ಗೀಸ್ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರು.ಉಡುಪಿಯ ಬೀಚ್ ನಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಅದ್ದೂರಿಯಾಗಿ ನಡೆಯಿತು.

Related posts

Leave a Reply