Header Ads
Header Ads
Header Ads
Breaking News

ಉಡುಪಿಯಲ್ಲಿ ಸದ್ದಿಲ್ಲದೆ ಭಕ್ತಿ ಹೆಜ್ಜೆಯ ಕ್ರಾಂತಿ : ಜನಪ್ರಿಯವಾಗಿದ್ದ ಭಜನಾ ಸಂಸ್ಕೃತಿಗೆ ಹೊಸ ಆಯಾಮ

ಈಗಿನ ಹುಡುಗ್ರು ಸಂಜೆಯಾದ್ರೆ ಸಾಕು, ಬಾರು, ಪಬ್ಬು ಅಂತ ಓಡಾಡ್ತಾರೆ. ಕರಾವಳಿಯಲ್ಲಂತೂ ಗಾಂಜಾ ಮಾಫಿಯಾ ಯುವ ಜನಾಂಗವನ್ನು ಕುಲಗೆಡಿಸಿಬಿಟ್ಟಿದೆ. ಈ ನಡುವೆ ಉಡುಪಿಯಲ್ಲಿ ಸದ್ದಿಲ್ಲದೆ ಭಕ್ತಿ ಹೆಜ್ಜೆಯ ಕ್ರಾಂತಿಯಾಗ್ತಿದೆ. ಈ ಕುರಿತ ಒಂದು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.ಲೈಫನ್ನು ಎಂಜಾಯ್ ಮಾಡ್ಬೇಕು ಅನ್ನೋದೊಂದೇ ಈಗಿನ ಹುಡುಗ್ರ ಉದ್ದೇಶ. ಕುಡಿಯೋದಕ್ಕೆ , ಪಾರ್ಟಿ ಮಾಡೋದಕ್ಕೆ ಏನಾದ್ರೂ ಒಂದು ನೆಪ ಬೇಕು ಅಷ್ಟೇ! ಅದ್ರಲ್ಲೂ ಉಡುಪಿ ಜಿಲ್ಲೆಯ ಮಧ್ಯಮ ವರ್ಗದ ಹುಡುಗ್ರು ದಿನೇ ದಿನೇ ಮದ್ಯದ ದಾಸರಾಗ್ತಿದಾರೆ. ಗಾಂಜಾ ಸೇವಿಸಿ ಸಮಾಜದ ಸ್ವಾಸ್ಥ್ಯ ಕೆಡಿಸ್ತಿದ್ದಾರೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕರಾವಳಿ ಭಾಗದ ಹಿರಿಯರು ಒಂದು ಮಹತ್ವದ ನಿರ್ಧಾರ ಮಾಡಿದ್ದಾರೆ. ಈ ಭಾಗದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಭಜನಾ ಸಂಸ್ಕೃತಿಗೆ ಹೊಸ ಆಯಾಮ ಕೊಟ್ಟಿದ್ದಾರೆ. ಯುವಕರನ್ನು ಸೆಳೆಯುವ ರೀತಿಯಲ್ಲಿ ಕುಣಿತ ಭಜನಾ ಕೂಟಗಳನ್ನು ಆಯೋಜಿಸ್ತಿದ್ದಾರೆ. ಉಡುಪಿಯ ಕಟಪಾಡಿ ಸಮೀಪದ ವಿಶ್ವನಾಥ ಕ್ಷೇತ್ರದಲ್ಲಿ ನಡೆದ ಕುಣಿತ ಭಜನೆಯ ಸುಂದರ ದೃಶ್ಯಗಳನ್ನೊಮ್ಮೆ ನೋಡಿ. ಮೈ ಮರೆತು ಕುಣಿದು ಸುಖಿಸುವ ಸಂಭ್ರಮ ಹೆಜ್ಜೆ ಹಾಕಿದವರಿಗೇ ಗೊತ್ತು.

ಕಟಪಾಡಿಯ ವಿಶ್ವನಾಥ ಕ್ಷೇತ್ರದಲ್ಲಿ ಯುವವಾಹಿನಿ ಸಂಘಟನೆಯವರು ತಂಡಗಳನ್ನು ಆಹ್ವಾನಿಸಿ ಈ ಕುಣಿತ ಭಜನೆ ಏರ್ಪಡಿಸಿದ್ದಾರೆ. ಪರಸ್ಪರ ಸ್ಪರ್ಧೆಗೆ ಇಳಿದವರಂತೆ ಭಾವಪರವಶರಾಗಿ ಯುವಕ-ಯುವತಿಯರು ಕುಣಿಯೋದನ್ನು ನೋಡೋದೇ ಕಣ್ಣಿಗೆ ಹಬ್ಬ. ದಾಸರ ಕೀರ್ತನೆಗಳನ್ನು ರಾಗವಾಗಿ ಹಾಡುತ್ತಾ, ಹೆಜ್ಜೆ ಹಾಕುತ್ತಾ ಸಮಯ ಕಳೆದದ್ದೇ ಗೊತ್ತಾಗಲ್ಲ. ಕರಾವಳಿ ಭಾಗದಲ್ಲಿ ಮೆಹೆಂದಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಹೇರಳವಾಗಿ ಅಮಲುಸೇವನೆ ಆಗುತ್ತಿತ್ತು. ಯುವಜನಾಂಗಕ್ಕೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಭಜನಾ ಕುಣಿತ ಕೂಟಗಳನ್ನು ಏರ್ಪಡಿಸಲಾಗುತ್ತಿದೆ. ಇದರ ಗುಣಾತ್ಮಕ ಪರಿಣಾಮವೋ ಎಂಬಂತೆ, ಇತ್ತೀಚೆಗೆ ಮಹೆಂದಿ, ಮೆರವಣಿಗೆಯಲ್ಲೂ ಡಿಜೆಗಳಿಗೆ ಬದಲಾಗಿ ಭಜನಾ ನೃತ್ಯ ನಡೆಸಲಾಗುತ್ತಿದೆ. ಭಜನೆ ಇದ್ದಲ್ಲಿ ವಿಭಜನೆ ಇಲ್ಲ ಅನ್ನೋ ಮಾತಿದೆ. ನಿಂತು ಹಾಡಿದರೆ ದೇವರು ಕುಣಿವ, ಕುಣಿದು ಹಾಡಿದರೆ ದೇವರು ಒಲಿವ ಅನ್ನೋ ಮಾತಿದೆ. ದೇವರು ಒಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಈ ಭಾಗದ ಯುವಕರಂತೂ ಈ ಕುಣಿತ ಭಜನೆಯಿಂದ ಥ್ರಿಲ್ ಆಗಿದ್ದಾರೆ.

 

Related posts

Leave a Reply

Your email address will not be published. Required fields are marked *