Header Ads
Header Ads
Header Ads
Breaking News

ಉಡುಪಿಯಲ್ಲಿ ಸರಕಾರಿ ಬಸ್ ಬಂದ್ ಮೊದಲ ಟ್ರಿಪ್ ಬಳಿಕ ಗೂಡು ಸೇರಿದ ಬಸ್ಸುಗಳು ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ

ಮಹದಾಯಿ ನೀರಿನ ವಿಚಾರವಾಗಿ ಕರ್ನಾಟಕ ಬಂದ್ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಆದ್ರೆ ಉಡುಪಿ ಜಿಲ್ಲೆಯಲ್ಲಿ ಬಂದ್‌ಗೆ ಯಾವುದೇ ಪ್ರತಿಕ್ರೀಯೆ ವ್ಯಕ್ತವಾಗಿಲ್ಲ. ಯಾವುದೇ ಸಂಘಟನೆ ಬಂದ್‌ಗೆ ಕರೆ ನೀಡಿಲ್ಲ ಈ ಹಿನ್ನಲೆಯಲ್ಲಿ ಬಂದ್ ನೀರಸವಾಗಿತ್ತು. ಶಾಲಾ ಕಾಲೇಜು, ಖಾಸಗೀ ಬಸ್‌ಗಳು ಎಂದಿನಂತೆ ಕಾರ್ಯಚರಿಸಿದವು.

ಆದ್ರೆ ಸರಕಾರಿ ನರ್ಮ್ ಬಸ್‌ಗಳು ಮಾತ್ರ ಒಂದು ಟ್ರಿಪ್ ನಡೆಸಿ ಬಳಿಕ ಓಡಾಟ ಸ್ಥಗಿತಗೊಳಿಸಿದವು. ಜಿಲ್ಲೆಯಲ್ಲಿ ಯಾವುದೇ ಬಂದ್ ಇಲ್ಲದಿದ್ದರೂ ಸಹ ನರ್ಮ್ ಬಸ್‌ಗಳು ಓಡಾಟ ಸ್ಥಗಿತಗೊಳಿಸುವುದು ಸರಕಾರಿ ಪ್ರೇರಿತ ಬಂದ್ ಎಂದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ. ಆದರೂ ಸಹ ಖಾಸಗೀ ಬಸ್‌ಗಳು ಎಂದಿನಂತೆ ಓಡಾಟ ನಡೆಸಿರುವುದ್ದರಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ.

Related posts

Leave a Reply