Header Ads
Header Ads
Breaking News

ಉಡುಪಿಯಲ್ಲಿ ಸಿಹಿ ಉತ್ಸವಕ್ಕೆ ಚಾಲನೆ

ಉಡುಪಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ವಾದಕರ ಒಕ್ಕೂಟ ನಿಯಮಿತ ವತಿಯಿಂದ ನಂದಿನಿ “ಸಿಹಿ ಉತ್ಸವ”ವನ್ನು ಹಮ್ಮಿಕೊಳ್ಳಲಾಗಿದ್ದು ಡಿ.21 ರಿಂದ ಜನವರಿ 9ರ ತನಕ ಈ ಸಿಹಿ ಉತ್ಸವ ನಡೆಯಲಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ವಾದಕರ ಒಕ್ಕೂಟ ನಿಯಮಿತ ಪ್ರತೀ ವರ್ಷ ಗ್ರಾಹಕರ ಅನುಕೂಲಕ್ಕಾಗಿ ನಂದಿನಿ ಸಿಹಿ ಉತ್ಸವ ಆಚರಿಸುತ್ತಿದ್ದು ಗ್ರಾಹಕರಿಗೆ ಸಿಹಿ ಉತ್ಪನ್ನಗಳ ಮೇಲೆ 10 ಶೇಕಡಾ ರಿಯಾಯಿತಿಯನ್ನ ನೀಡುತ್ತಿದೆ. ಇಂದು ಸಿಹಿ ಉತ್ಸವವನ್ನು ಉಡುಪಿ ನಗರಸಭೆ ಎದುರುಭಾಗದಲ್ಲಿರುವ ನಂದಿನಿ ಓಟ್ ಲೇಟ್‍ನಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ವಾದಕರ ಒಕ್ಕೂಟ ನಿಯಮಿತ ನಿರ್ದೇಶಕರಾದ ರವಿರಾಜ್ ಹೆಗ್ಡೆ ಚಾಲನೆ ನೀಡಿದರು.

ಈ ಸಂದರ್ಬದಲ್ಲಿ ಮಾತನಾಡಿದ ಅವರು ನಂದಿನಿ ಉತ್ಪನ್ನಗಳ ಪರಿಚಯ ಮತ್ತು ಎಲ್ಲಾ ಗ್ರಾಹಕರಿಗೆ ಸಿಹಿ ಉತ್ಪನ್ನ ತಲುಪುವ ಉದ್ದೆಶದೊಂದಿಗೆ ಈ ಸಿಹಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಂದಿನಿ ಸಿಹಿ ಉತ್ವನ್ನಗಳಾದ ಮೈಸೂರು ಪಾಕ್, ಕ್ಯಾಷ್ಯು ಬರ್ಫಿ,ಕೊಕೊನೆಟ್ ಬರ್ಫಿ, ಬಾದಾಮ್ ಬರ್ಫಿ, ಬೇಸನ್ ಲಾಡು, ಕುಂದಾ, ರಸಗುಲ್ಲಾ,ಗಳು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಸಿಗಲಿದೆ.

Related posts

Leave a Reply