Header Ads
Header Ads
Breaking News

ಉಡುಪಿಯಲ್ಲೂ “ಪ್ಲ್ಯಾಶ್ ಮಾಬ್” : ಅಚಾನಕ್ ಆಗಿ ರಂಜಿಸಿದ ಚಿಣ್ಣರು

ಉಡುಪಿ: ಮಹಾನಗರಗಳಲ್ಲಿ ಇತ್ತೀಚೆಗೆ ಟ್ರೆಂಡ್ ಆಗಿ ಪ್ರಸಿದ್ಧಿ ಪಡೆದಿರುವ ಫ್ಲ್ಯಾಶ್ ಮಾಬ್ ಸಣ್ಣ ಊರುಗಳಿಗೂ ಕಾಲಿಟ್ಟಿದೆ. ಅಚಾನಕ್ ಆಗಿ ಇವತ್ತು ಮಣಿಪಾಲದ ಕೆನರಾ ಮಾಲ್ ಮುಂದೆ ಚಿಣ್ಣರು ಫ್ಲ್ಯಾಶ್ ಮಾಬ್ ಮಾಡಿ ಉಡುಪಿಯ ಜನರನ್ನು ರಂಜಿಸಿದ್ರು. ಐದು ವರ್ಷದ ಚಿಣ್ಣರಿಂದ ಹಿಡಿದು ಇಪ್ಪತ್ತು ವರ್ಷದವರೆಗಿನ ಯುವಕ ಯುವತಿಯರು ಸ್ಟೆಪ್ ಹಾಕಿ ಗಮನ ಸೆಳೆದ್ರು.

ಸಿನೆಮಾದ ಹಾಡಿನ ತುಣುಕುಗಳು ಪ್ಲೇ ಆಗುತ್ತಿರುವಾಗಲೇ ಜನರ ಮಧ್ಯದಿಂದಲೇ ಮಕ್ಕಳು ಎದ್ದು ಬಂದು ಕುಣಿದದ್ದು ನೆರೆದವರಿಗೆ ಸಾಕಷ್ಟು ಮುದ ನೀಡಿತು. ಮಾಲ್ ಹೊರಗಡೆ ಜನರ ಮಧ್ಯದಿಂದ ಮಕ್ಕಳು ಡ್ಯಾನ್ಸ್ ಮಾಡತೊಡಗಿದಾಗಲೇ ಅಲ್ಲಿದ್ದವರಿಗೆ ಇದು ಗಮನಕ್ಕೆ ಬಂದದ್ದು. ಅಚಾನಕ್ ಅಂತ ಪ್ರಾರಂಭವಾದ ಫ್ಲ್ಯಾಶ್ ಮಾಬ್ ಐದೇ ನಿಮಿಷದಲ್ಲಿ ಮುಗಿದಾಗ ನೆರೆದ ಜನ ನಿರಾಶರಾದ್ರು. ಇನ್ನಷ್ಟು ಹೊತ್ತು ಇದ್ದರೆ ಚೆನ್ನಾಗಿತ್ತು ಎಂದುಕೊಂಡು ತಮ್ಮ ಮನೆಗಳಿಗೆ ವಾಪಾಸಾದ್ರು.

 

Related posts

Leave a Reply

Your email address will not be published. Required fields are marked *