Header Ads
Breaking News

ಉಡುಪಿಯಾದ್ಯಂತ ’ಈದುಲ್ ಫಿತ್ರ್’ ಸಂಭ್ರಮ : ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

ಈದುಲ್ ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಇಂದು ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಝ್ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ರು. ಉಡುಪಿಯ ಇಂದ್ರಾಳಿ, ನಗರ, ಕೊಡವೂರು, ದೊಡ್ಡಣಗುಡ್ಡೆ, ಅಂಬಾಗಿಲು ಮತ್ತಿತರೆಡೆಗಳಲ್ಲಿರುವ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜನಜಂಗುಳಿಯೇ ಹರಿದು ಬಂದಿತ್ತು. ಕಳೆದ ತಿಂಗಳ ಐದನೇ ತಾರೀಕಿನಿಂದ ಮುಸ್ಲಿಂ ಬಾಂಧವರು ಉಪವಾಸದಲ್ಲಿದ್ದರು. ಒಂದು ತಿಂಗಳ ಉಪವಾಸ ಮುಗಿದ ಮರುದಿನ ಹಬ್ಬ ಆಚರಿಸುವುದು ವಾಡಿಕೆ. ಅದರಂತೆ ಇಂದು ಬೆಳಿಗ್ಗೆಯೇ ಮಸೀದಿಗಳಿಗೆ ತೆರಳಿದ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ನಡೆಸಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಬಂಧು ಮಿತ್ರರ ಮನೆಗಳಿಗೆ ತೆರಳುತ್ತಾರೆ. ಅಲ್ಲಿ ಬಂಧು ಮಿತ್ರರಿಗೆ ವಿಶೇಷ ಊಟೋಪಚಾರದ ವ್ಯವಸ್ಥೆ ಮಾಡುತ್ತಾರೆ. ಈದುಲ್ ಫಿತ್ರ್ ಎಂದೂ ಕರೆಯಲ್ಪಡುವ ಈ ಹಬ್ಬದಲ್ಲಿ ಮುಸ್ಲಿಮರು ತಮ್ಮ ಬಂಧುಗಳಿಗೆ ಪರಸ್ಪರ ದಾನಗಳನ್ನೂ ನೀಡುತ್ತಾರೆ. ಪ್ರತೀ ಕುಟುಂಬದ ಸದಸ್ಯ ತಮ್ಮ ಆಪ್ತೇಷ್ಟರಿಗೆ ನಿಗದಿತ ಪ್ರಮಾಣದ ಅಕ್ಕಿಯನ್ನು ಕಡ್ಡಾಯವಾಗಿ ದಾನ ಮಾಡುವುದು ಈ ಹಬ್ಬದ ವಿಶೇಷಗಳಲ್ಲೊಂದು. ಪುಟ್ಟ ಮಕ್ಕಳಿಗೆ ಮತ್ತು ವಯಸ್ಕರಿಗೆ ತಮ್ಮ ಶಕ್ತಿಯಾನುಸಾರ ಹಣ ನೀಡುವ ಕ್ರಮವೂ ಈ ಹಬ್ಬದಲ್ಲಿ ರೂಢಿಯಲ್ಲಿದೆ.

 

Related posts

Leave a Reply

Your email address will not be published. Required fields are marked *