Header Ads
Breaking News

ಉಡುಪಿಯ ಅಂಗಡಿ, ಮಳಿಗೆಗಳಿಗೆ ಡಿಸಿ ಜಿ.ಜಗದೀಶ್ ದಿಢೀರ್ ಭೇಟಿ : ಮಾಸ್ಕ್ ಧರಿಸದವರ ವಿರುದ್ದ ಗರಂ

ಉಡುಪಿ ನಗರದ ಅಂಗಡಿ, ಮಳಿಗೆಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ದಿಢೀರ್ ಭೇಟಿ ನೀಡಿದರು.ಉಡುಪಿಯ ಸರ್ವಿಸ್ ಬಸ್ ನಿಲ್ದಾಣ, ಸಂಸ್ಕ್ರತ ಕಾಲೇಜು ರಸ್ತೆ, ಮಸೀದಿ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದವರ ವಿರುದ್ದ ಗರಂ ಆದ ಪ್ರಸಂಗ ನಡೆಯಿತು. ದಿಢೀರ್ ಡಿಸಿಯನ್ನು ಕಂಡ ಜನರು ಒಮ್ಮಿಂದೊಮ್ಮೆಲೆ ವಿಚಲಿತಗೊಂಡಿದ್ದಾರೆ. ಮಾಸ್ಕ್ ಧರಿಸದವರಿಗೆ ಜಿಲ್ಲಾಧಿಕಾರಿ ಸ್ಥಳದಲ್ಲೇ ದಂಡ ವಿಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಕೆಲ ಯುವಕರು ಜಿಲ್ಲಾಧಿಕಾರಿಗಳನ್ನು ನೋಡಿ ಸ್ಥಳದಿಂದ ಕಾರು, ಬೈಕ್‍ನಲ್ಲಿ ಪರಾರಿಯಾದ ಪ್ರಸಂಗವೂ ನಡೆಯಿತು. ಮಾಸ್ಕ್ ಹಾಕದ ಸಾರ್ವಜನಿಕರಿಂದ ಸ್ಥಳದಲ್ಲೇ 100 ರುಪಾಯಿ ದಂಡ ವಸೂಲಿ ಮಾಡಲಾಯಿತು. ಈ ವೇಳೆ ಕೋವಿಡ್ 19 ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಂಗಡಿ ಮಾಲಕರಿಗೆ ಖಡಕ್ ಸೂಚನೆ ನೀಡಿದರು.

Related posts

Leave a Reply

Your email address will not be published. Required fields are marked *