Header Ads
Header Ads
Breaking News

ಉಡುಪಿಯ ಅಂಬಲಪಾಡಿಯಲ್ಲಿ ಅಂಚೆ ಸಮ್ಮೇಳನ

ಅಂಚೆ ಮನೋರಂಜನಾ ಕೂಟ ಉಡುಪಿ, ಮಣಿಪಾಲ ಇವರ ಸಹಯೋಗದಲ್ಲಿ ಪ್ರಥಮ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿಯ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಲಿದೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅಂಚೆ ಅಧೀಕ್ಷಕ ರಾಜಶೇಖರ್ ಭಟ್ ಜುಲೈ ೧ರಂದು ನಡೆಯುವ ಮೊದಲ ಅಂಚೆ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದಾರೆ.

ಸಮ್ಮೇಳನದ ಅದ್ಯಕ್ಷತೆಯನ್ನು ರಾಜಶೇಖರ್ ಭಟ್ ವಹಿಸಲಿದ್ದು ಶಾಸಕ ರಘುಪತಿ ಭಟ್, ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ. ಸಮ್ಮೇಳನದಲ್ಲಿ ಅನೇಕ ಗೋಷ್ಟಿಗಳು ನಡೆಯಲಿದ್ದು ಸಾಂಸ್ಕೃತಿಕ ಸಿಂಚನ ವಿವಿಧ ಸ್ಪರ್ಧೆಯ ವಿಜೇತರುಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

Related posts

Leave a Reply