Header Ads
Header Ads
Breaking News

ಉಡುಪಿಯ ಅನಂತ ನಗರದಲ್ಲಿ ವೀ ಬಝಾರ್ ಉದ್ಘಾಟನೆ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲಾ ವಸ್ತುಗಳು ಲಭ್ಯ

ಉಡುಪಿ-ಮಣಿಪಾಲದ ಅನಂತ ನಗರದಲ್ಲಿರುವ ಸಂಖ್ಯಾ ಹೈಟ್ಸ್‌ನಲ್ಲಿ ವೀ ಬಝಾರ್ ಮಲ್ಟಿ ಪರ್ಪಸ್ ಮಳಿಗೆ ಶುಭಾರಂಭಗೊಂಡಿತು. ಗ್ರಾಹಕರಿಗೆ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸಿಗಲಿದೆ.

ಉದ್ಯಮಿ ವಿಲಾಸ್ ನಾಯಕ್ ಮಾಲಕತ್ವದ ಈ ಮಳಿಗೆಯನ್ನು ಸಂಸದೆ ಶೋಭಾ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಉದ್ಯಮದಲ್ಲಿ ಹೊಸತನಕ್ಕೆ ಕೈ ಹಾಕುವ ವ್ಯಕ್ತಿ ಅಂದರೆ ವಿಲಾಸ್ ನಾಯಕ್ ಇಲ್ಲಿನ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಈ ಮಳಿಗೆ ಆರಂಭಿಸಿದ್ದು ಉದ್ಯಮದಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಅಂತ ಶುಭ ಹಾರೈಸಿದರು.

ಸಮಾರಂಭದಲ್ಲಿ ಬಿಜೆಪಿ ಮುಖಂಡ ಗುರ್ಮೆ ಸುರೇಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಶಿಲ್ಪಾ ರಘುಪತಿಭಟ್, ವೀಣಾ ಶೆಟ್ಟಿ, ಸುಮಿತ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಎಲ್ಲಾ ರೀತಿಯ ದಿನಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. 2008 ರ ವಸ್ತುಗಳ ಬೆಲೆಗಳ ಅಂಕಿ ಅಂಶ ಮತ್ತು ಈಗಿನ ಬೆಲೆಗಳ ಅಂಕಿ ಅಂಶ ಜೊತೆಗೆ ಮೋದಿ ಮತ್ತೊಮ್ಮೆ ಎಂಬ ಸಂದೇಶವು ಇಲ್ಲಿ ಪಡೆಯುವ ವಸ್ತುಗಳ ಬಿಲ್ ಮೇಲೆ ನಮೂದಿಸಲಾಗಿರುವುದು ಈ ಮಳಿಗೆಯ ವಿಶೇಷವಾಗಿದೆ.

Related posts

Leave a Reply

Your email address will not be published. Required fields are marked *