Header Ads
Header Ads
Breaking News

ಉಡುಪಿಯ ಆಭರಣ ಜುವೆಲ್ಲರ್ಸ್ ನಲ್ಲಿ “ಗೋ ಗ್ರೀನ್” ಅಭಿಯಾನ

 ಪ್ರತಿಷ್ಟಿತ ಚಿನ್ನಾಭರಣಗಳ ಸಂಸ್ಥೆಯಾದ ಆಭರಣ ಜುವೆಲ್ಲರೆಸ್ ತನ್ನ ಸ್ಥಾಪನಾ ವರ್ಷದ ಪ್ರತೀಕವಾಗಿ 1935 ಗಿಡವನ್ನು ನೆಡುವ ಯೋಜನೆ ಹಮ್ಮಿಕೊಂಡಿದ್ದು ಆಭರಣ ಗೋ ಗ್ರೀನ್ ಅಭಿಯಾನಕ್ಕೆ ಇಂದು ಉಡುಪಿಯಲ್ಲಿ ಚಾಲನೆ ಸಿಕ್ಕಿತು.ಆಭರಣ ಜುವೆಲ್ಲರ್ಸ್ ನಲ್ಲಿ ನಡೆದ ಸಮಾರಂಭದಲ್ಲಿ ಗೋ ಗ್ರೀನ್ ಅಭಿಯಾನಕ್ಕೆ ಪರಿಸರವಾದಿ, ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀ ಬಾಯಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಪರಿಸರ ನೇರ, ಮತ್ತು ಸತ್ಯ ಅಲ್ಲಿ ಕಪಟ ಇಲ್ಲ. ಹಾಗೆನೇ ನಮ್ಮ ಜೀವನ ಕೂಡಾ ನೇರ ಸತ್ಯವಾಗಬೇಕಾದರೆ ಗಿಡಗಳನ್ನು ಬೆಳೆಸುವುದು ಅಗತ್ಯವಾಗಬೇಕಾಗಿದೆ.ಗಿಡ ನೆಡುವುದು ಕಷ್ಟ ಅಲ್ಲ.ಆದ್ರೆ ಅದನ್ನು ಪೋಷಿಸುವುದು ಕಷ್ಟ.ಆದ್ರೆ ಅದು ನೀಡುವ ಫಲ ಜೀವನ ಉಲ್ಲಾಸಕ್ಕೆ ಕಾರಣವಾಗುತ್ತದೆ ಅಂದ್ರು. ಇನ್ನು ಉರಗ ತಜ್ಞ , ಪರಿಸರದವಾದಿ ಗುರುರಾಜ್ ಸನಿಲ್ ಮಾತನಾಡಿ ಒಂದು ಗಿಡದಲ್ಲಿ ಇಡೀ ಪ್ರಕೃತಿ ಇದೆ.
    ಒಂದು ಗಿಡ ಇಡೀ ಜೀವಜಾಲವನ್ನು ಸೃಷ್ಟಿ ಮಾಡುತ್ತದೆ, ಗಿಡಗಳನ್ನು ಕೊಡುವಾಗ ಪ್ರೀತಿಯಿಂದ ಕೊಡಿ,ಅದರ ಮಹತ್ವ ತಿಳಿಸಿ ಎಂದು ಪರಿಸರದ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ ಆಭರಣ ಸಂಸ್ಥೆಯ ಸ್ಥಾಪಕರಾದ ಮಧುಕರ್ ಕಾಮತ್, ರಾಧಾ ಕಾಮತ್, ನಿರ್ದೇಶಕರಾದ ಮಹೇಶ್ ಕಾಮತ್, ದಯಾನಂದ ಕಾಮತ್ ಮುಂತಾದವರು ಉಪಸ್ಥಿತರಿದ್ದರು.ಆಭರನ ಗೋ ಗ್ರೀನ ಭಿಯಾನದ ಅಂಗವಾಗಿ ನಾರ್ತ್ ಶಾಲೆಯಲ್ಲಿ ಸಾಂಕೇತಿಕವಾಗಿ ಗಿಡವನ್ನು ನೆಡಲಾಯಿತು. ಆಭರಣ ಸಂಸ್ಥೆ ಇರುವ ಶಾಖೆಗಳ ಸುತ್ತಮುತ್ತ ಶಾಲೆಗಳಿಗೆ ಗಿಡ ಕೊಡುವ ಮತ್ತು ಗಿಡ ನಡುವ ಯೋಜನೆ ಆಭರಣ ಹಮ್ಮಿಕೊಂಡಿದ್ದು ಒಟ್ಟು ೧೯೩೫ ಗಿಡವನ್ನು ನಡುವ ಯೋಜನೆ ಹಮ್ಮಿಕೊಂಡಿದೆ.

Related posts

Leave a Reply