Header Ads
Header Ads
Breaking News

ಉಡುಪಿಯ ಆಶಾ ನಿಲಯದಲ್ಲಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ

ಉಡುಪಿ ಜಿಲ್ಲಾ ಜಾತ್ಯತೀತ ಜನತಾ ದಳದಿಂದ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆಶಾನಿಲಯದ ವಿಶೇಷ ಮಕ್ಕಳ ಜೊತೆ ಜೆಡಿಎಸ್ ಕಾರ್ಯಕರ್ತರು ಕೇಕ್ ಕತ್ತರಿಸಿ ಕುಮಾರಸ್ವಾಮಿಯವರ ಹುಟ್ಟುಹಬ್ಬ ಆಚರಿಸಿದ್ರು. ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿಯವರು ಈ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ರು. ಸುಮಾರು ಐವತ್ತರಷ್ಟು ವಿಶೇಷ ಮಕ್ಕಳು ಹುಟ್ಟುಹಬ್ಬದ ಸಂಭ್ರಮದಲ್ಲಿ ನಲಿದರು.ಇದೇ ವೇಳೆ ವಿಶೇಷ ಮಕ್ಕಳ ಡ್ಯಾನ್ಸ್ ಸೇರಿದವರ ಮನ ಸೂರೆಗೊಂಡಿತು. ಸಿಹಿತಿಂಡಿಯ ಜೊತೆಗೆ ವಿಶೇಷ ಮಕ್ಕಳಿಗೆ ಬಿರಿಯಾನಿಯ ವ್ಯವಸ್ಥೆಯನ್ನೂ ಜಿಲ್ಲಾ ಜೆಡಿಎಸ್ ಮಾಡಿತ್ತು. ಒಟ್ಟಿನಲ್ಲಿ ನಾಡದೊರೆಯ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

 

Related posts

Leave a Reply