Header Ads
Header Ads
Breaking News

ಉಡುಪಿಯ ಉಪ್ಪೂರಿನ ಹಾಲಿನ ಡೇರಿ ಲೋಕಾರ್ಪಣೆ : 2.5ಲಕ್ಷ ಲೀಟರ್ ಸಾಮರ್ಥ್ಯದ ಘಟಕ

ಉಡುಪಿಯ ಉಪ್ಪೂರಿನಲ್ಲಿ 2.5ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೇರಿಯ ಲೋಕಾರ್ಪಣಾ ಸಮಾರಂಭ ನಡೆಯಿತು. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ ಉಪ್ಪೂರಿನಲ್ಲಿ ನಿರ್ಮಿಸಲಾಗಿದೆ. ನೂತನ ಡೇರಿಯನ್ನು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಉದ್ಘಾಟಿಸಿದರು.ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಉಡುಪಿಯ ಉಪ್ಪೂರಿನಲ್ಲಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೇರಿ ನೂತನವಾಗಿ ನಿರ್ಮಿಸಿದ್ದು ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.ಸಂಪೂರ್ಣ ಯಾಂತ್ರಿಕೃತ ಹಾಗೂ ಸುಸಜ್ಜಿತ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು 2.5 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೈರಿ ನಿರ್ಮಾಣಗೊಂಡಿದ್ದು ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಹಾಲಿನ ಡೈರಿ ನಿರ್ಮಾಣವಾಗಿದೆ. ಈ ಹಿಂದೆ ಮಣಿಪಾಲದಲ್ಲಿ ಹಾಲಿನ ಡೈರಿ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನು ಮುಂದೆ ಉಪ್ಪೂರಿನಲ್ಲಿ ಘಟಕ ಕಾರ್ಯನಿರ್ವಹಿಸಲಿದೆ. ಮುಂದಿನ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಈ ಹಾಲಿನ ಡ್ರೈರಿ ಘಟಕ ಆರಂಭವಗಿದ್ದು ಇಂದು ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಲೋಕಾರ್ಪಣೆಗೊಳಿಸಿದರು. ಹಾಲು ಸಂಸ್ಕ್ರಣ ಘಟಕ, ಪ್ರಯೋಗಾಲಯ, ರೆಪ್ರಿಜರೇಶನ್, ಉತ್ಪನ್ನ ಘಟಕ ಸೇರಿದಂತೆ ವಿವಿಧ ಘಟಕಗಳನ್ನು ಉಪಸ್ಥಿತರಿದ್ದ ಗಣ್ಯರು ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಸಚಿವ ರೇವಣ್ಣ ಕಳೆದ ನಾಲ್ಕೈದು ವರ್ಷದ ಬರಗಾಲ ಸಂದರ್ಬದಲ್ಲಿ ಹಾಲಿನ ಡ್ರೈರಿ ಇರುವುದರಿಂದಲೇ ರೈತಾಪಿ ವರ್ಗ ನೆಮ್ಮದಿಯ ಜೀವನ ನಡೆಸುವಂತಾಗಿದೆ. ರೈತರಿಗೆ ನೇರವಾಗಿ ನೆರವಾಗುವುದು ಸಹಕಾರಿ ಕ್ಷೇತ್ರ ಮಾತ್ರ. ಹಾಲಿಗೆ ಸರಕಾರದಿಂದ ನೀಡುವ5 ರೂ ಪ್ರೋತ್ಸಾಹ ಧನವನ್ನು ಇನ್ನೂ 1 ರೂ ಹೆಚ್ಚಿಸಬೆಕೆಂದು ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ದ.ಕ, ಮತ್ತು ಉಡುಪಿ ಜಿಲ್ಲೆಯಲ್ಲಿ ನಾಲ್ಕುವರೆ ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದೆ.ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ಬಡ್ಡಿ ರಹಿತ ಸಾಲ ನೀಡಬೇಕೆಂಬ ಯೋಜನೆ ರೂಪಿಸಲಾಗುತ್ತಿದೆ ಎಂದರುಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಶ್ರೀನಿವಾಸ ಶೆಟ್ಟಿ, ರಘುಪತಿಭಟ್ , ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ,ಎಂ.ಎನ್ ರಾಜೇಂದ್ರ ಕುಮಾರ್, ದ.ಕ ಸಹಕಾರಿ ಹಾಲು ಉತ್ಪದಕರ ಒಕೂಟದ ಅದ್ಯಕ್ಷ ರವಿರಾಜ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply