Header Ads
Header Ads
Header Ads
Breaking News

ಉಡುಪಿಯ ಕಟಪಾಡಿಯ ಏಣಗುಡ್ಡೆಯಲ್ಲಿ ಕಿಯಾ ಮೋಟಾರು ಶೋರೂಂ ಆರಂಭ

ಈಗಾಗಲೇ ಮಾರುಕಟ್ಟೆಯಲ್ಲಿ ಕಿಯಾ ಕಾರುಗಳ ಕ್ರೇಜ್ ಹೆಚ್ಚಾಗಿದೆ. ಕರಾವಳಿಯಲ್ಲೂ ಕಿಯಾ ಕಾರುಗಳಿಗೆ ಬಹಳಷ್ಟು ಬೇಡಿಕೆ ಬಂದೊದಗಿದೆ. ಪ್ರತಿಷ್ಠಿತ ಕಂಪೆನಿಯಾದ ಕಿಯಾ ಮೋಟಾರು ಸಂಸ್ಥೆಗಳ ಶೋರೂಂ ಇದೀಗ ಉಡುಪಿಯಲ್ಲೂ ತನ್ನ ಸೇವೆಯನ್ನು ಆರಂಭಿಸಿದೆ.

ಹೊಸ ಲುಕ್ ಮತ್ತು ಆಕರ್ಷಕ ತಂತ್ರಜ್ಞಾನಗಳನ್ನೊಳಗೊಂಡ ಕಿಯಾ ಕಾರುಗಳಿಗೆ ಕರಾವಳಿ ಭಾಗದಲ್ಲೂ ಹೆಚ್ಚಿನ ಬೇಡಿಕೆ ಬಂದಿದೆ. ಕಿಯಾ ಕಾರು ಪ್ರೀಯರ ಕ್ರೇಜ್‌ನ್ನು ಹೆಚ್ಚಿಸುತ್ತಿದ್ದು, ವಿನೂತನ ಮತ್ತು ಹೊಸ ಲುಕ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಉಡುಪಿಯ ಕಟಪಾಡಿಯ ಏಣಗುಡ್ಡೆಯಲ್ಲಿ ಕಿಯಾ ಕಾರುಗಳ ಶೋರೂಂ ಅನ್ನು ಆರಂಭಿಸಲಾಗಿದ್ದು ಕೆನರಾ ಲ್ಯಾಂಡ್ ಇನ್ವೆಸ್ಟ್ ಮೆಂಟ್ ಲಿಮಿಟೆಡ್ ನ ಚೇರ್‌ಮ್ಯಾನ್ ಟಿ. ಅಶೋಕ್ ಪೈ ರಿಬ್ಬನ್ ಕತ್ತರಿಸುವ ಹಾಗೂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಮೇರಿಕಾ ಸೇರಿದಂತೆ ವಿದೇಶಗಳಲ್ಲಿ ಕಿಯಾ ಕಾರುಗಳಿಗೆ ಭಾರೀ ಬೇಡಿಕೆ ಇದೆ. ಭವಿಷ್ಯದಲ್ಲಿ ಕಿಯಾ ಕಾರುಗಳು ಭಾರತದ ಬ್ರಾಂಡ್ ಕಾರುಗಳಾಗಳಿವೆ. ಆದ್ದರಿಂದ ಕಿಯಾ ಕಾರುಗಳು ಕರಾವಳಿಯಲ್ಲೂ ಜನಪ್ರೀಯವಾಗಿ ಅಂತ ಶುಭ ಹಾರೈಸಿದರು.

ಸಮಾರಂಭದಲ್ಲಿ ಕಿಯಾ ಮೋಟಾರ್ಸ್ ಇಂಡಿಯಾದ ದಕ್ಷಿಣ ವಲಯದ ಮುಖ್ಯಸ್ಥ ಎಸ್.ಎನ್ ಸೋಮ ಶೇಖರ್, ಆಡಳಿತ ನಿರ್ದೇಶಕ ಆರೂರು ಗಣೇಶ್ ರಾವ್, ಚೇರ್ ಮ್ಯಾನ್ ಆರೂರು ಪ್ರಭಾಕರ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *