Header Ads
Header Ads
Breaking News

ಉಡುಪಿಯ ಕಲ್ಸಂಕ ರಾಯಲ್ ಗಾರ್ಡನ್ ಬಳಿ ಅಪಾಯ ಆಹ್ವಾನಿಸುತ್ತಿದೆ ವಿದ್ಯುತ್ ಕಂಬ

 

ಉಡುಪಿ: ಕಲ್ಸಂಕ ರಾಯಲ್ ಗಾರ್ಡನ್ ರಸ್ತೆ ಪಕ್ಕದ ಸಿಮೆಂಟಿನ ವಿದ್ಯುತ್ ಕಂಬವು ಮೇಲ್ಭಾಗದಲ್ಲಿ ಬಿರುಕು ಬಿಟ್ಟಿದೆ.

ಒಳಭಾಗದ ಕಬ್ಬಿಣದ ಕಂಬಿಗಳು ಎದ್ದು ಕಾಣುತ್ತಿವೆ. ನಗರಕ್ಕೆ ವಿದ್ಯುತ್ ಸಂಪರ್ಕ ನೀಡುವ ಮುಖ್ಯ ತಂತಿಗಳು ಈ ಕಂಬದ ಮೂಲಕ ಹಾದುಹೋಗಿದೆ. ದುಸ್ಥಿತಿಯಲ್ಲಿರುವ ಕಂಬ ಉರುಳಿ ಬಿದ್ದು ದುರಂತಗಳು ಸಂಭವಿಸುವ ಸಾಧ್ಯತೆ ಇದೆ.

ತಕ್ಷಣ ಸಂಬಂಧ ಪಟ್ಟ ವಿದ್ಯುತ್ ಇಲಾಖೆಯವರು ಹೊಸ ಕಂಬವನ್ನು ಅಳವಡಿಸುವಂತೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.

 

Related posts

Leave a Reply

Your email address will not be published. Required fields are marked *