Header Ads
Breaking News

ಉಡುಪಿಯ ಕೃಷ್ಣಮಠದಲ್ಲಿ ಹನುಮಜಯಂತಿಯ ಸಂಭ್ರಮ

ಉಡುಪಿಯ ಕೃಷ್ಣಮಠದಲ್ಲಿ ಕಡಗೋಲು ಕೃಷ್ಣ ದೇವರೇ ಆರಾಧ್ಯಮೂರ್ತಿಯಾದರೂ ಆಂಜನೇಯ ಸ್ವಾಮಿಗೂ ವಿಶೇಷ ಪೂಜಾಸ್ಥಾನವಿದೆ. ಕೃಷ್ಣಮುಖ್ಯ ಪ್ರಾಣರೆಂದೇ ಇಲ್ಲಿ ಅವಳಿ ದೇವತೆಗಳ ಆರಾಧನೆ ನಡೆಯುತ್ತೆ. ಈ ದೇಶದ ಪರಮ ವೈಷ್ಣವ ಕ್ಷೇತ್ರವಾದ ಉಡುಪಿಯಲ್ಲಿ ಇಂದು ಹನುಮಜ್ಜಯಂತಿಯ ಸಂಭ್ರಮ ಮನೆ ಮಾಡಿತ್ತು. ಕೃಷ್ಣನೂರಿನಲ್ಲಿ ಹನುಮ ಜಪ ಹೇಗಿತ್ತು ? ಬನ್ನೀ ನೋಡೋಣ.

ರಾಮಭಕ್ತ ಹನುಮ ಉಡುಪಿಯಲ್ಲಿ ಕೃಷ್ಣ ದೇವರ ಜೊತೆಗಾರ. ಹೌದು ಕೃಷ್ಣಮಠದಲ್ಲಿ ಆಂಜನೇಯ ಸ್ವಾಮಿಯ ಆರಾಧನೆಗೆ ವಿಶೇಷ ಮಹತ್ವ ಇದೆ. ಈ ಕ್ಷೇತ್ರದಲ್ಲಿ ದಿನವೂ ನಡೆಯುವ ಅನ್ನ ಸಂತರ್ಪಣೆಗೆ ಹನುಮ ದೇವರೇ ಶ್ರೀರಕ್ಷೆ, ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಅನ್ನ ಸಂತರ್ಪಣೆಗೆ ವಿಶೇಷ ಮಹತ್ವ. ಉಡುಪಿ ಕೃಷ್ಣನನ್ನು ಅನ್ನಬ್ರಹ್ಮನೆಂದು ಕರೆಯಲು ಮುಖ್ಯಪ್ರಾಣ ದೇವರ ಸನ್ನಿಧಾನವೇ ಕಾರಣ. ಇಂತಹಾ ಪರಮ ಪವಿತ್ರ ಕ್ಷೇತ್ರದಲ್ಲಿ ಇಂದು ಪರ್ಯಾಯ ಪಲಿಮಾರು ಮಠದ ವತಿಯಿಂದ ಹನುಮಜ್ಜಯಂತಿ ನಡೆಯಿತು. ಮುಖ್ಯಪ್ರಾಣ ಭಕ್ತರ ಆಶ್ರಯದಲ್ಲಿ ಸಾವಿರಾರು ಜನರಿಗೆ ಹಾಲುಪಾಯಸದ ರಸದೂಟವನ್ನು ಪ್ರಸಾದವಾಗಿ ವಿತರಿಸಲಾಯ್ತು. ದಿನವಿಡೀ ಕೃಷ್ಣಮುಖ್ಯಪ್ರಾಣರ ಸನ್ನಿಧಿಯಲ್ಲಿ ಪೂಜೆ, ಭಜನೆಗಳು ನಡೆದವು. ಅನ್ನ ಸಂತರ್ಪಣೆಯೇ ಹನುಜ್ಜಯಂತಿಯ ಪ್ರಧಾನ ಆಕರ್ಷಣೆ, ಅನ್ನದೇವರಿಗೆ ನಡೆಯುವ ಪಲ್ಲಪೂಜೆಯಲ್ಲಿ ಪರ್ಯಾಯ ಪಲಿಮಾರು ಸ್ವಾಮಿಗಳು ಭಾಗಿಯಾದರು.

ಎಂಟು ಶತಮಾನಗಳ ಹಿಂದೆ ಉಡುಪಿಯ ಮಠದಲ್ಲಿ ಕೃಷ್ಣನ ಮೂರ್ತಿಯನ್ನು ಪ್ರತಿಷ್ಟಾಪಿಸಿದವರು ಮಧ್ವಾಚಾರ್ಯರು. ಈ ನವಮತ ಸ್ಥಾಪಕರು ಹನುಮ ದೇವರ ಅವತಾರ ಅನ್ನೋದು ಭಕ್ತರ ನಂಬಿಕೆ. ಹಾಗಾಗಿ ಕೃಷ್ಣನಷ್ಟೇ ಮುಖ್ಯಪ್ರಾಣನಿಗೂ ಈ ಕ್ಷೇತ್ರದಲ್ಲಿ ಮಹತ್ವದ ಸ್ಥಾನವಿದೆ. ಕೃಷ್ಣ ದೇವರ ಗರ್ಭಗುಡಿಯ ಮುಂಭಾಗದಲ್ಲಿ ಒಂದು ಹನುಮ ವಿಗ್ರಹವಿದೆ, ಇನ್ನೊಂದು ವಿಗ್ರಹ ಅನ್ನಸಂತರ್ಪೆಣೆ ನಡೆಯುವ ಭೋಜನ ಶಾಲೆಯಲ್ಲಿ ರಾರಾಜಿಸುತ್ತಿದೆ. ಅನ್ನ ದೇವರ ಆರಾಧನೆ ನಡೆಯುವ ಸ್ಥಳದಲ್ಲಿರುವ ಕಾರಣಿಕದ ಹನುಮ ಸನ್ನಿಧಾನಕ್ಕೆ ಅನೇಕ ಪವಾಡಗಳ ಕಥೆಯಿದೆ. ಇಂದು ಹನುಮಜ್ಜಯಂತಿಯ ಪ್ರಯುಕ್ತ ಸಾವಿರಾರು ಮಂದಿ ಭಕ್ತರು ಇಷ್ಟ ದೇವರ ದರ್ಶನ ಕೈಗೊಂಡರು.

ದಿನವಿಡೀ ಹನುಮಜಪ ಮಾಡಿ , ಇಳಿಸಂಜೆಯ ವೇಳೆಗೆ ಬ್ರಹ್ಮರಥೋತ್ಸವ ಪೂರೈಸಿ, ಹನುಮ ದೇವರ ಜಯಂತ್ಯೋತ್ಸವಕ್ಕೆ ಮಂಗಳ ಹಾಡಲಾಗುತ್ತೆ.

Related posts

Leave a Reply

Your email address will not be published. Required fields are marked *