Header Ads
Breaking News

ಉಡುಪಿಯ ನಾಗರಿಕ ಸಮಿತಿಯಿಂದ ಆಹಾರ ಸಾಮಾಗ್ರಿ ವಿತರಣೆ

ದೇಹದ ಸ್ವಾಧೀನ ಕಳೆದುಕೊಂಡು ಸಂಕಷ್ಟದ ಜೀವನ ಸಾಗಿಸುತ್ತಿದ್ದ ಬಡಕುಟುಂಬಕ್ಕೆ ಉಡುಪಿಯ ನಾಗರೀಕ ಸಮಿತಿ ನೆರವಾಗಿದ್ದು ಅಗತ್ಯ ವಸ್ತುಗಳನ್ನು ನೀಡಿ ಮಾನವೀಯತೆ ಮೆರೆದಿದೆ.
ಅಂಬಲಪಾಡಿ ಬಂಕರಕಟ್ಟ ಇಲ್ಲಿಯ ನಿವಾಸಿ ವಿಠಲ ಪೂಜಾರಿ, ದೇಹದ ಸ್ವಾಧೀನ ಕಳೆದುಕೊಂಡು ಮನೆಯಲ್ಲಿ ಮಲಗಿದ್ದಲಿಯೇ ಎರಡು ವರ್ಷಗಳಿಂದ ದಿನಗಳ ಕಳೆಯುತ್ತಿದ್ದರು. ಆಟೋ ಚಾಲಕರಾಗಿ ದುಡಿಯುತ್ತಿದ್ದ ಇವರಿಂದ ಮನೆ ಸಂಸಾರ ನಡೆಯುತಿತ್ತು. ಬೇರೆ ಯಾವುದೇ ಆದಾಯ ಮೂಲಗಳಿಲ್ಲದ ಈ ಬಡ ಕುಟುಂಬದ ಅಸಹಾಯಕ ಪರಿಸ್ಥಿತಿ ಎದುರಿಸುತಿತ್ತು. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಎರಡು ತಿಂಗಳಿಗೆ ಬೇಕಾದ ದಿನಸಿ ಸಾಮಾಗ್ರಿಗಳ ವಿತರಿಸಿ ಸಹಕರಿಸಿತು. ನಾಗರಿಕ ಸಮಿತಿ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ರಾಜೇಶ್ ಕಲ್ಮಾಡಿ, ಕೃಷ್ಣಮೂರ್ತಿ ಸಾಮಗ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *