Header Ads
Header Ads
Breaking News

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ:ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಅವರ ವರ್ಗಾವಣೆ ನಡೆದಿದ್ದು ಜಿಲ್ಲೆಗೆ ನೂತನ ಡಿಸಿ ಆಗಿ ಹಪ್ಸಿಬಾ ರಾಣಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಹಿಂದಿನ ಡಿಸಿ ಪ್ರಿಯಾಂಕ ಮೇರಿ ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಸ್ವೀಕರಿಸಿ ಶುಭ ಹಾರೈಸಿದರು.ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು. ಕರ್ನಾಟಕ ಸರ್ಕಾರ ಹಲವು ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದರು. ಅವರ ಜಾಗಕ್ಕೆ ಹುಬ್ಬಳ್ಳೀ ಧಾರವಾಡ ವಾಹನ ಇಲಾಖೆ ನಿರ್ದೇಶಕಿಯಾಗಿದ್ದ ಹೆಬ್ಸಿಬಾ ರಾಣಿ ಕೊರ್ಲಪತಿ ಉಡುಪಿ ಡಿಸಿಯಾಗಿ ವರ್ಗಾವಣೆಗೊಂಡಿದ್ದಾರೆ. ಸದ್ಯ ಉಡುಪಿ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಮರಳು ಸಮಸ್ಯೆ ತಾಂಡವವಾಡುತ್ತಿದೆ, ನೂತನ ಡಿಸಿ ಹೆಬ್ಸಿಬಾ ರಾಣಿ ಮರಳು ಸಮಸ್ಯೆಯನ್ನು ಮುಂದೆ ಹೇಗೆ ನಿಭಾಯಿಸಲಿದ್ದಾರೆ ಕಾದು ನೋಡಬೇಕಾಗಿದೆ.

Related posts

Leave a Reply