Header Ads
Header Ads
Breaking News

ಉಡುಪಿಯ ಪೆರಂಪಳ್ಳಿಯಲ್ಲಿ ಸುಮಾರು 2800 ವರ್ಷಗಳ ಗುಹಾ ಸಮಾಧಿ ಪತ್ತೆ.!

ದೇವಿಯ ಕಾರಣಿಕವೋ, ಉಡುಪಿಯ ಜನರ ಭಾಗ್ಯವೋ ಗೊತ್ತಿಲ್ಲ. ಕಟೀಲು ಮೇಳದ ಸೇವೆಯ ಯಕ್ಷಗಾನ ನಡೆಯಬೇಕಾಗಿದ್ದ ಸ್ಥಳದಲ್ಲಿ 2800 ವರ್ಷಗಳಷ್ಟು ಹಳೆಯ ಗುಹಾಸಮಾಧಿಯೊಂದು ಪತ್ತೆಯಾಗಿದೆ.ಉಡುಪಿ ಜಿಲ್ಲೆಯ ಪೆಂರಂಪಳ್ಳಿಯಲ್ಲಿರುವ ಹರಿಕರಷ್ಣ ಶಿವತ್ತಾಯರ ಮನೆಯಲ್ಲಿ ಮಂಗಳವಾರ ಕಟೀಲು ದೇವಸ್ಥಾನದ ಯಕ್ಷಗಾನ ಮೇಳದ ಸೇವೆಯ ಪ್ರದರ್ಶನ ನಡೆಯಲಿದೆ.

ಈ ಪ್ರಯುಕ್ತ ನೆಲ ಸಮತಟ್ಟು ಮಾಡುವಾಗ ದೇಶದ ಗಮನಸೆಳೆಯುವ ಗುಹಾ ಸಮಾಧಿಯೊಂದು ಪತ್ತೆಯಾಗಿದೆ. ಇದೊಂದು ಅಪರೂಪದ ವಿದ್ಯಮಾನ, ಯಾಕಂದ್ರೆ ಇದೇ ಸ್ಥಳದಲ್ಲಿ ಈ ಹಿಂದೆ ಕೃಷಿ ನಡೆಸಲಾಗುತ್ತಿತ್ತು, ಆರೇಳು ಬಾರಿ ಇದೇ ಗದ್ದೆಯಲ್ಲಿ ವಿವಿಧ ಮೇಳಗಳ ಯಕ್ಷಗಾನವೂ ನಡೆದಿತ್ತು. ಯಾವತ್ತೂ ಈ ಸಮಾಧಿಯ ಕುರುಹೇ ಇರಲಿಲ್ಲ. ಆದರೆ ಇದೇ ಮೊದಲಬಾರಿಗೆ ಕಟೀಲು ಮೇಳದ ಯಕ್ಷಗಾನವನ್ನು ಇಲ್ಲಿ ನಡೆಸಲು ಯೋಜಿಸಲಾಗಿತ್ತು. ಇದಕ್ಕಾಗಿ ಜೆಸಿಬಿ ಮೂಲಕ ನೆಲಸಮತಟ್ಟು ಮಾಡುವಾಗ ಮಣ್ಣು ಕುಸಿದು ಈ ಸಮಾಧಿ ಪತ್ತೆಯಾಗಿದೆ. ಕ್ರಿಸ್ತಪೂರ್ವ 800 ವರ್ಷಗಳ ಹಿಂದೆ ಈ ರೀತಿಯ ಗುಹಾಸಮಾಧಿ ಮಾಡುವ ಪರಿಪಾಠವಿತ್ತು. ಅಂದರೆ 2800 ವರ್ಷಗಳ ಹಿಂದೆ, ಮನುಷ್ಯನ ಅಸ್ತಿಯನ್ನು ಮಡಿಕೆಯಲ್ಲಿ ಇಟ್ಟು ಈ ರೀತಿಯ ಗುಹಾ ಸಮಾಧಿಯಲ್ಲಿ ಮಣ್ಣು ಮಾಡಲಾಗುತ್ತಿತ್ತು. ಇಲ್ಲೂ ಕೂಡ, ಮಡಿಕೆಯ ಚೂರುಗಳು, ಶಿಲಾಯುಗದ ಆಯುಧಗಳು ಪತ್ತೆಯಾಗಿದೆ. ಉಡುಪಿಯಲ್ಲಿ 2800 ವರ್ಷಗಳ ಹಿಂದೆಯೂ ಜನವಸತಿ ಇತ್ತು ಅನ್ನೋದರ ಕುರುಹು ಇದು ಅನ್ನೋ ಕಾರಣಕ್ಕೆ ಈ ರಚನೆಗೆ ಐತಿಹಾಸಿಕ ಮಹತ್ವವೂ ಬಂದಿದೆ.

Related posts

Leave a Reply