Header Ads
Header Ads
Breaking News

ಉಡುಪಿಯ ಪ್ರಗತಿ ನಗರದ ಪಿಕಾಕ್ ಪಾಯಿಂಟ್‍ನಲ್ಲಿ ಬೆಂಕಿ ಅನಾಹುತ

 ಅಲೆವೂರು ಕರ್ವಾಲಿನ ಪಿಕಾಕ್ ಪಾಯಿಂಟ್ ಪ್ರದೇಶದಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ. ಉಡುಪಿ ತಾಲೂಕಿನ ಅಲೆವೂರು ಪ್ರಗತಿ ನಗರದಲ್ಲಿ  ಪೊಟೋ  ಶೂಟ್ ಹಾಗೂ ಪ್ರೇಮಿಗಳ ಹಾಟ್ ಸ್ಪಾಟ್ ಆಗಿರುವ ಪಿಕಾಕ್ ಪಾಯಿಂಟ್ ಸುಮಾರು 4 ಎಕರೆ ಪ್ರದೇಶ ಹೊಂದಿದೆ. ಒಣಗಿದ ಹುಲ್ಲು ಇರುವ ಕಾರಣ ನಿನ್ನೆ ರಾತ್ರಿ ಯಾರೋ ಬೆಂಕಿ ಹಾಕಿರುವ ಶಂಕೆ ವ್ಯಕ್ತ್ರವಾಗಿದ್ದು, ಬೆಂಕಿ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸಿತು. ಸುತ್ತ ಮುತ್ತಲು ಮನೆ ಇರುವ ಕಾರಣ ಬೆಂಕಿ ಆತಂಕ ಸೃಷ್ಟಿಸಿತ್ತು. ಆದ್ರೆ ಸಕಾಲಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದು ಅಪಾಯ ತಪ್ಪಿಸಿದ್ದಾರೆ. ಪ್ರತೀ ವರ್ಷ ಇಲ್ಲಿ ಬೆಂಕಿ ಬೀಳುತ್ತಿದ್ದು ಕಟ್ಟಿಗೆಗೋಸ್ಕರ ಇಲ್ಲಿ ಬೆಂಕಿ ಹಾಕುತ್ತಾರೆ ಎಂಬುದು ಕೆಲವರ ವಾದವಾದರೆ ಇನ್ನು ಕೆಲವರು ಪ್ರಕೃತಿ ಸೌಂದರ್ಯ ವೀಕ್ಷಿಸಲು ಬರುವವರು ಸಿಗರೇಟ್ ಸೇದಿ ಹಾಕುವುದರಿಂದ ಇಲ್ಲಿ ಬೆಂಕಿ ಅನಾಹುತವಾಗುತ್ತಿದೆ ಎಂದು ಅಭಿಪ್ರಾಯವನ್ನು ಸ್ಥಳಿಯರು ವ್ಯಕ್ತಪಡಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *