Header Ads
Header Ads
Breaking News

ಉಡುಪಿಯ ಬಾಸೆಲ್ ಚರ್ಚಿನ ಆಶ್ರಮಕ್ಕೆ ಬೆಂಕಿ, ಮೂವರು ವಿಧವೆಯರಿದ್ದ ಕಟ್ಟಡ ಸಂಪೂರ್ಣ ಭಸ್ಮ

ಉಡುಪಿಯ ಮಿಶನ್ ಕಂಪೌಂಡ್ ಬಳಿ ಇರುವ ಬಾಸೇಲ್ ಮಿಶನ್ ಚರ್ಚಿನ ಹಿಂಬದಿಯಲ್ಲಿ ವಿಧವೆಯರಿಗಾಗಿ ನಿರ್ಮಿಸಿದ್ದ ಕಟ್ಟಡಕ್ಕೆ ಬೆಂಕಿ ತಗುಲಿದ್ದು ಅಪಾರ ಹಾನಿ ಉಂಟಾಗಿದೆ.
ಉಡುಪಿ ಬಾಸೆಲ್ ಚರ್ಚಿನ ಆಶ್ರಯದಲ್ಲಿ ೩ ಜನ ವಿಧವೆಯರು ವಾಸ ಇದ್ದು, ಇಂದು ಅಡುಗೆ ಮಾಡುವ ಸಂದರ್ಭದಲ್ಲಿ ಆಕ್ಮಮಿಕವಾಗಿ ಬೆಂಕಿ ತಗುಲಿದೆ. ಸೆಲೇಸ್ಟಿನ್, ಗ್ರೇಸಿ ವೆಲ್ಟ್‌ನ್ ಹಾಗೂ ಮನೋರಮಾ ಬಂಗೇರ ಈ ಕಟ್ಟಡದಲ್ಲಿ ವಾಸವಾಗಿದ್ದು ಗ್ರೇಸಿ ವೆಲ್ಟ್‌ನ್ ಒಲೆ ಹಚ್ಚಿ ಅಡುಗೆ ಮಾಡುವ ಸಂಧರ್ಭದಲ್ಲಿ ಬೆಂಕಿಯ ಕಿಡಿ ಹಾರಿ ಇಡೀ ಕಟ್ಟಡಕ್ಕೆ ಬೆಂಕಿ ತಗುಲಿದೆ. ಲಕ್ಷಾಂತರ ರೂ ಬಟ್ಟೆಗಳು, ಮನೆ ಬಳಕೆ ವಸ್ತುಗಳು ಬೆಂಕಿಗೆ ಅಹುತಿಯಾಗಿದೆ. ಉಡುಪಿ ಅಗ್ನಿ ಶಾಮಕ ದಳ ಬೆಂಕಿ ಆರಿಸಿದರೂ ಹಂಚಿನ ಕಟ್ಟಡ ಸಂಪೂರ್ಣ ಭಸ್ಮವಾಗಿದೆ. ಸ್ಥಳಕ್ಕೆ ಸಚಿವ ಪ್ರಮೋದ್ ಮದ್ವರಾಜ್ ಆಗಮಿಸಿ ಸಾಂತ್ವನ ನೀಡಿದರು.

Related posts

Leave a Reply