Header Ads
Header Ads
Breaking News

ಉಡುಪಿಯ ಬೀಡಿನಗುಡ್ಡೆಯಲ್ಲಿ ವಲಸೆ ಕಾರ್ಮಿಕನ ಕೊಲೆ

ಉಡುಪಿ: ವಲಸೆ ಕಾರ್ಮಿಕನನ್ನ ಕೊಲೆಗೈದಿರುವ ಘಟನೆ ಉಡುಪಿಯಲ್ಲಿ  ನಗರದಲ್ಲಿ ನಡೆದಿದೆ. ನಗರದ ಬೀಡಿನಗುಡ್ಡೆ ಮೈದಾನದ ಪಕ್ಕದಲ್ಲೇ ಕಾರ್ಮಿಕನ ಶವ ಪತ್ತೆಯಾಗಿದ್ದು ಕೊಲೆ ಮಾಡಿ‌ ರಸ್ತೆ ಪಕ್ಕ ಎಸೆದಿರುವುದು ತಿಳಿದುಬಂದಿದೆ.

ಕೊಲೆಗೀಡಾದ ಕಾರ್ಮಿಕ ಉಡುಪಿ ನಗರಸಭೆಯಲ್ಲಿ ಹೊರಗುತ್ತಿಗೆಯ ಆಧಾರದಲ್ಲಿ ಕಸ ವಿಲೇವಾರಿಯ ಕೆಲಸ ಮಾಡಿಕೊಂಡಿದ್ದ. ಇಂದು ಬೆಳಗ್ಗೆ ಬೀಡಿನಗುಡ್ಡೆಯ ವಸತಿ ರಹಿತರ ಆಶ್ರಯದಲ್ಲಿ ಕೊಲೆಗೀಡಾದ ಕಾರ್ಮಿಕ ಹಾಗೂ ಇತರ ಐವರ ನಡುವೆ ಗಲಾಟೆ ನಡೆದಿದ್ದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.  ಕೊಲೆಗೀಡಾದವನ ಹೆಸರು ಸ್ಥಳ ಇನ್ನಷ್ಟೇ ತಿಳಿದು ಬರಬೇಕಿದೆ. ಸ್ಥಳಕ್ಕೆ ಎಸ್ಪಿ ನಿಶಾ ಜೇಮ್ಸ್, ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಜೈ ಶಂಕರ್ ಸೇರಿದಂತೆ ನಗರಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *