Header Ads
Header Ads
Breaking News

ಉಡುಪಿಯ ಮಲ್ಪೆಯಲ್ಲಿ ಮೀನುಗಾರರ ಪ್ರತಿಭಟನೆ ಲೈಟ್ ಫಿಶಿಂಗ್ ವಿರುದ್ದ ಬೋಟ್ ಮಾಲೀಕರ ಪ್ರತಿಭಟನೆ ಮೀನುಗಾರಿಕಾ ಕಚೇರಿಗೆ ಮುತ್ತಿಗೆ

ಆಳ ಸಮುದ್ರದಲ್ಲಿ ನಡೆಸುತ್ತಿರುವ ಲೈಟ್ ಫಿಶ್ಶಿಂಗ್ ಅನ್ನು ಈಗಾಗಲೇ ಕೇಂದ್ರ ಸರ್ಕಾರ ನಿಷೇಧ ಮಾಡಿದೆ. ಆಳ ಸಮುದ್ರದಲ್ಲಿ ಎಲೋಜಿನ್ ನಂತಹ ಲೈಟ್ ಬಳಸಿ ಮೀನುಗಾರಿಕೆಯನ್ನು ನಡೆಸಲಾಗುತ್ತಿದ್ದು ಇದರ ವಿರುದ್ದ ಉಡುಪಿಯ ಮಲ್ಪೆಯಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದರು.

ಲೈಟ್ ಫಿಶಿಂಗ್ ವಿರುದ್ದ ಕ್ರಮ ಕೈಗೊಳ್ಳುವಂತೆ ಅನೇಕ ಮನವಿ ಸಲ್ಲಿಸಿರುವ ಡೀಪ್ ಸೀ ಮೀನುಗಾರರ ಸಂಘ ಇದರ ಹೊರತಾಗಿಯೂ ಮಲ್ಪೆಯಲ್ಲಿ ನಿರಾತಂಕವಾಗಿ ಲೈಟ್ ಫಿಶಿಂಗ್ ನಡೆಯುತ್ತಿದೆ. ಈ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶ ಆಗುವ ಸಾಧ್ಯತೆ ಇದ್ದು ಈ ಹಿನ್ನಲೆಯಲ್ಲಿ ಲೈಟ್ ಫಿಶಿಂಗ್ ಮಾಡುವವರ ವಿರುದ್ದ ಕ್ರಮಕ್ಕೆ ಮೀನುಗಾರರು ಒತ್ತಾಯಿಸಿದ್ದಾರೆ.