Header Ads
Header Ads
Breaking News

ಉಡುಪಿಯ ಮಾರುಥಿ ವಿಥಿಕಾದಲ್ಲಿ ನೀರು ಪೋಲು : ನಗರಾಡಳಿತ ಗಮನ ಸೆಳೆಯಲು ವಿನೂತನ ಪ್ರತಿಭಟನೆ

ಉಡುಪಿಯಲ್ಲಿ ಬಿಸಿಲ ಧಗೆ ಏರುತ್ತಿದೆ.ಇತ್ತ ಡ್ಯಾಂಗಳಲೂ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಇಷ್ಟಾದರೂ ಉಡುಪಿಯ ಮಾರುಥಿ ವಿಧಿಕಾದಲ್ಲಿ ಕಳೆದ ಒಂದು ವಾರಗಳಿಂದ ನೀರು ಪೋಲಾಗುತ್ತಿದ್ದು ಇಲ್ಲಿನ ಸಮಾಜಿಕ ಕಾರ್ಯಕರ್ತರು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. 

ಮಾರುಥಿ ವಿಥಿಕಾ ರಸ್ತೆಯ ಇಕ್ಕೆಲಗಳಲ್ಲಿ ಕೇಬಲ್ ಅಳವಡಿಸಲು ಹೊಂಡ ತೋಡಲಾಗಿದ್ದು ಇದರ ಪರಿಣಾಮ ನೀರಿನ ಪೈಪ್ ಒಡೆದು ನಿರಂತರ ನೀರು ಪೋಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಸ್ಥಳೀಯಾಡಳಿತ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.ಇಷ್ಟಾದರೂ ಸಹ ಸ್ಥಳಕ್ಕೆ ಅಧಿಕಾರಿಗಳು ಬಂದು ನೀರು ಪೋಲು ತಡೆಯುವ ಬಗ್ಗೆ ಕ್ರಮ ಕೈಗೊಳ್ಳಲಿಲ್ಲ. ಈ ಹಿನ್ನಲೆಯಲ್ಲಿ ನಗರಾಡಳಿತದ ಗಮನಸೆಳೆಯಲು ಪೋಲಾಗುವ ನೀರಿನಲ್ಲಿ ವಾಹನವನ್ನು ತೊಳೆದು ವಿನೂತನ ಪ್ರತಿಭಟನೆ ಮಾಡಿದ್ದಾರೆ. ಸುಮಾರು ನಾಲ್ಕೈದು ವಾಹನ ತೊಳೆದು ಆದಷ್ಟು ಬೇಗ ನೀರು ಪೋಲು ತಡೆಯಬೇಕು , ಜನರೇ ಅಧಿಕಾರಿಗಳಿಗೆ, ನಗರಾಡಳಿತಕ್ಕೆ ಚೀಮಾರಿ ಹಾಕುವ ಮುಂಚೆನೇ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರು ಪೋಲು ತಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರನಾಥ ಮೆಸ್ತ ಆಗ್ರಹಿಸಿದ್ದಾರೆ.

Related posts

Leave a Reply