Header Ads
Header Ads
Header Ads
Breaking News

ಉಡುಪಿಯ ರಾಯಲ್ ಗಾರ್ಡ್‌ನಲ್ಲಿ ತ್ಯಾಜ್ಯಗಳ ರಾಶಿ ಕೊಳೆತು ನಾರುತ್ತಿರುವ ಪರಿಸರ ಆಸುಪಾಸಿನ ಮನೆಗಳಿಗೆ, ಸಾರ್ವಜನಿಕರಿಗೆ ತೊಂದರೆ

 

ಆಂಕರ್: ಉಡುಪಿಯ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ ನಲ್ಲಿ ಉಡುಪಿ ಉತ್ಸವ ಡಿಸೆಂಬರ್ 3ರಂದು ಪ್ರಾರಂಭವಾಗಿದ್ದು, ಒಂದೆಡೆ ಉಡುಪಿ ಉತ್ಸವ ಆದರೆ ಇನ್ನೊಂದೆಡೆ ಗಬ್ಬುನಾರುತ್ತಿರುವ ತ್ಯಾಜ್ಯ ವಸ್ತುಗಳ ಸಮಸ್ಯೆ ಇಲ್ಲಿ ಕಾಣಬಹುದು. ನಗರದ ಯಾವ ಭಾಗದಲ್ಲಾದರೂ ಸ್ವಚ್ಛತೆಗೆ ಅಡ್ಡಿಯುಂಟುಮಾಡುವ ತ್ಯಾಜ್ಯಗಳ ಸಮಸ್ಯೆ ಇದ್ದೆ ಇದೆ, ಆದರೆ ಉಡುಪಿ ಉತ್ಸವದಲ್ಲಿ ಸಮಸ್ಯೆ ಇರೋದು ಸೋಜಿಗಕ್ಕೆ ಕಾರಣವಾಗಿದೆ. ಇಲ್ಲಿ ತ್ಯಾಜ್ಯದ ವೀಲೆವಾರಿ ವಾರಕ್ಕೊಮ್ಮೆ ತೆರವುಗೊಳಿಸುವುದಂತೆ. ಕಬ್ಬಿನ ನಾರು, ಪ್ಲಾಸ್ಟಿಕ್ ತಟ್ಟೆ, ಉಳಿದ ತಿಂಡಿ ತಿನಿಸುಗಳು ಕೊಳೆತು ನಾರುತ್ತಿದೆ, ಇದರಿಂದ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಆಗುವುದಲ್ಲದೆ, ಪರಿಸರವು ಹಾಳಾಗುವುದು. ಆಸುಪಾಸಿನ ಮನೆಗಳಿಗೆ, ಸಾರ್ವಜನಿಕರಿಗೆ ಇದರಿಂದ ತುಂಬಾನೆ ತೊಂದರೆ ಅಗುತ್ತಿದ್ದರು ಮೂಗು ಮುಚ್ಚಿ ಕೂರಬೇಕಾಗಿದೆ.
ಇತ್ತ ಕಡೆ ಉಡುಪಿ ಉತ್ಸವ ಸಮಿತಿ ಆಗಲಿ ಉಡುಪಿ ನಗರ ಸಭೆಯಾಗಲಿ ಗಮನ ಹರಿಸುತ್ತಿಲ್ಲ.ಪರಿಸರವಾದಿ ವಿನಯಚಂದ್ರ ಇವರು ಉಡುಪಿಯ ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಇವರಿಗೆ ಮಾಹಿತಿ ನೀಡಲಾಗಿದ್ದು ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಾಧ್ಯಮ ಮೂಲಕ ಮನವಿ ಮಾಡಿದ್ದಾರೆ.

Related posts

Leave a Reply