Header Ads
Header Ads
Breaking News

ಉಡುಪಿಯ ವಿಮಾ ನೌಕರರ ಸಂಘದ 61ನೇ ವಿಭಾಗೀಯ ಸಮ್ಮೇಳನ

ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಎಲ್.ಐ.ಸಿಯ ಮೇಲೆ ನೇರ ಪರಿಣಾಮ ಬೀಳಲಿದ್ದು ಇದೀಗ ಎಲ್ಲಾ ಖಾಸಗೀಕರಣದ ಬಳಿಕ ಕೇಂದ್ರ ಸರಕಾರದ ಕಣ್ಣು ಎಲ್.ಐ.ಸಿ ಮೇಲೆ ಬಿದ್ದಿದೆ. ನಾವು ಸಂಘಟಿತವಾಗಿ ಈ ಷಡ್ಯಂತ್ರದ ವಿರುದ್ದ ಹೋರಾಡಬೇಕಾಗಿದೆ ಎಂದು ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜೆ. ಸುರೇಶ್ ಅಭಿಪ್ರಾಯಪಟ್ಟಿದ್ದಾರೆ. ಅವರು ಉಡುಪಿ ಬ್ರಹ್ಮಗಿರಿಯ ಲಯನ್ಸ್ ಭವನದ ಕಾಮ್ರೇಡ್ ಬಿ ಮಾಧವ ವೇದಿಕೆಯಲ್ಲಿ ನಡೆದ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ೬೧ನೇ ವಿಭಾಗೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಕಾರ್ಮಿಕ ಐಕ್ಯತೆಯ ಹೋರಾಟವನ್ನು ಕೆಲವೊಂದು ಶಕ್ತಿಗಳು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯಲು ಷಡ್ಯಂತ್ರ ಮಾಡುತ್ತಿದೆ. ಆ ನೀತಿಯನ್ನು ನಾವು ಸೋಲಿಸಬೇಕು. ನಮ್ಮ ಕಾರ್ಮಿಕ ವರ್ಗ ಪ್ರಜ್ಞೆ ಎಚ್ಚರ ಮಾಡಿಕೊಂಡಾಗ ಮಾತ್ರ ನಮ್ಮ ಮುಂದಿರುವ ಸವಾಲುಗಳನ್ನು ಐಕ್ಯತೆ ಎದುರಿಸಲು ಸಾದ್ಯವಾಗುತ್ತದೆ ಎಂದರು. ಸಮಾರಂಭದಲ್ಲಿ ಉಡುಪಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ದಕ್ಷಿಣ ಮಧ್ಯ ವಲಯ ನೌಕರರ ಒಕ್ಕೂಟದ ಎಸ್.ಕೆ ಗೀತಾ, ಎಲ್.ಐ.ಸಿ ಕ್ಲಾಸ್ ೧ ಆಪೀಸರ್ಸ್ ಅಸೋಸಿಯೇಶನ್ ಅದ್ಯಕ್ಷ ಅಣ್ಣಯ್ಯ ನೀಲಾವರ್, ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *