Header Ads
Header Ads
Breaking News

ಉಡುಪಿಯ ಶೋಕಮಾತಾ ಇಗರ್ಜಿಯಲ್ಲಿ ಈದ್, ಮುಸ್ಲೀಂ ಹಿಂದೂ ಕ್ರೈಸ್ತ ಮುಖಂಡರು ಭಾಗಿ


ಇಪ್ತಾರ್ ಕೂಟ ವಿವಾದ ನಡೆದಿರುವ ಬೆನ್ನಲ್ಲೆ ಸರ್ವಧರ್ಮಗಳ ಸೌಹಾರ್ದತೆಗೆ ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಸರ್ವಧರ್ಮ ಈದ್ ಆಚರಿಸಲಾಯಿತು.
ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಜೆರಾಲ್ಡ್ ಐಸಾಕ್ ಲೋಬೋ ಅವರ ನೇತೃತ್ವದಲ್ಲಿ ಈ ಸರ್ವ ಧರ್ಮ ಈದ್ ಆಚರಣೆ ನಡೆಯಿತು. ಅಷ್ಟ ಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀಪಾದರು, ಉಡುಪಿ ಜಿಲ್ಲಾ ವಕ್ಫ್ ಮಂಡಳಿಯ ಉಪಾದ್ಯಕ್ಶ ಮೌಲಾನಾ ಅಬ್ದುಲ್ ರಹಿಮಾನ್, ಮಂಗಳೂರು ಸಿಎಸ್‌ಐ ದೇವಾಲಯದ ರೆ. ನೋಯೆಲ್ ಪ್ರಶಾಂತ್ ಕರ್ಕಡ ಮುಂತಾದವರು ಈದ್ ಸಂಭ್ರಮದಲ್ಲಿ ಭಾಗವಹಿಸಿ ಈದ್ ಸಂದೇಶ ನೀಡಿದರು.

Related posts

Leave a Reply