Header Ads
Header Ads
Breaking News

ಉಡುಪಿಯ ಶ್ರೀಕೃಷ್ಣ ಮಠದ ಪರಿಸರದಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಅಲೆದಾಡುತ್ತ ದಿನಕಳೆಯುತ್ತಿದ್ದ ಅಪರಿಚಿತ ವೃದ್ಧೆಯ ಗುರುತು ಪತ್ತೆ ಹಚ್ಚಿ, ಸ್ಥಳಿಯರು ಮಹಿಳಾ ಪೊಲೀಸರ ವಶಕ್ಕೆ ನೀಡಿದ ಘಟನೆ ಗುರುವಾರ ನಡೆದಿದೆ.

ಹೆಬ್ರಿ ಸಮೀಪದ ಕುಚ್ಚೂರು ಜನತಾ ನಿವೇಶನದಲ್ಲಿ ಮಗ ಗೋಪಿನಾಥ ಅವರೊಂದಿಗೆ ರಾಧ ವಾಸವಾಗಿದ್ದರು. ಇವರು ಕಳೆದ ಜುಲೈ ೨೪ ರಂದು ಇದ್ದಕಿದ್ದಂತೆ ಮನೆಯಿಂದ ಕಾಣೆಯಾಗಿದ್ದರು ಎಂದು ತಿಳಿದು ಬಂದಿದೆ. ವೃದ್ಧೆಯು ಕೆಲವು ದಿನಗಳಿಂದ ಉಡುಪಿ ಶ್ರೀಕೃಷ್ಣ ಮಠದ ಪರಿಸರದಲ್ಲಿ ನೆಲೆ ಕಂಡಿದ್ದರು. ಯಾರಾದರು ಕೊಟ್ಟದನ್ನು ತಿಂದು, ಉದರ ಹಸಿವು ನಿಗಿಸಿಕೊಂಡು, ದಿನ ಕಳೆಯುತ್ತಿದ್ದರು.ಕಾಣೆಯಾದ ಬಗ್ಗೆ, ಪತ್ರಿಕೆಯಲ್ಲಿ ವರದಿ ಭಾವಚಿತ್ರ ನೋಡಿದ ಸ್ಥಳಿಯರು, ವೃದ್ಧೆಯ ಗುರುತು ಪತ್ತೆ ಹಚ್ಚಿದ್ದಾರೆ. ವೃದ್ಧೆಯ ಗುರುತು ಪತ್ತೆ ಹಚ್ಚಿ, ಸಾಂತ್ವನ ಹೇಳಿ ಇಲಾಖೆಯ ಮಡಿಲಿಗೆ ಸೇರಿಸುವಲ್ಲಿ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಸ್ಥಳಿಯರಾದ ಎಚ್ ಎಮ್ ಇಮಾದ್, ಎಂ.ಸುಧಾಕರ್ ಶೆಣೈ, ಗಣೇಶ್ ಅಲೆವೂರು, ಮಾರ್ಪಳ್ಳಿ ಗೋಪಾಲ ಪೂಜಾರಿ, ನಿತ್ಯಾನಂದ ಅಲೆವೂರು ಸಹಕರಿಸಿ ಮಾನವಿಯತೆ ಮೆರೆದಿದ್ದಾರೆ.

Related posts

Leave a Reply