Header Ads
Breaking News

ಉಡುಪಿಯ ಹೆಲ್ತ್ ರೆಸಾರ್ಟ್‌ನಲಿ ಎಚ್.ಡಿ.ಕೆ, ಎಚ್.ಡಿ.ಡಿ

ಸಿ.ಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉಡುಪಿಯ ಹಲ್ತ್ ರಿಸಾರ್ಟ್‌ಗೆ ಆಗಮಿಸಿದ್ದಾರೆ. ಕಾಪುವಿನ ಮೂಳೂರಿನಲ್ಲಿರುವ ಸಾಯಿ ರಾಧಾ ರಿಸಾರ್ಟ್‌ನಲ್ಲೇ ನಾಲ್ಕೈದು ದಿನ ತಂಗುವ ಸಾಧ್ಯತೆ ಇದೆ. ಬೆಂಗಳೂರುನಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ತಂದೆ ಮಗ ರಾತ್ರಿ ರಿಸಾರ್ಟ್ ನಲ್ಲಿ ವಾಸ್ತವ್ಯ ಮಾಡಿದ್ದಾರೆ. ಕಳೆದ ಭಾನುವಾರ ಸಿಎಂ ಕುಮಾರಸ್ವಾಮಿ ಚುನಾವಣಾ ಪ್ರಚಾರ ಮುಗಿಸಿಕೊಂಡು ಎರಡು ದಿನ ಇದೇ ರಿಸಾರ್ಟ್‌ನಲ್ಲಿ ತಂಗಿದ್ದರು. ಪ್ರಾಥಮಿಕ ಚಿಕಿತ್ಸೆ ಪೂರೈಸಿ ವಾರದ ನಂತರ ಬರುವುದಾಗಿ ತಿಳಿಸಿದ್ದರು. ಅಂತೆಯೇ ತಂದೆ ದೇವೇಗೌಡ ಜೊತೆಗೆ ಪುನರಾಗಮಿಸಿದ್ದಾರೆ. ಈಹೆಲ್ತ್ ರಿಸಾರ್ಟ್ ನಲ್ಲಿ ಪಂಚ ಕರ್ಮ ಚಿಕಿತ್ಸೆ ಸೇರಿದಂತೆ ವಿವಿಧ ಆಯುರ್ವೇದ ಚಿಕಿತ್ಸೆ ಗೆ ಇವರು ಒಳಪಡಲಿದ್ದಾರೆ. ಈ ಭೇಟಿಯನ್ನು ಸಂಪೂರ್ಣ ಖಾಸಗಿಯಾಗಿಯೇ ಕಳೆಯಲು ಸಿಎಂ ಬಯಸಿದ್ದಾರೆ. ಹಾಗಾಗಿ ರಿಸಾರ್ಟ್‌ನ ಅಸುಪಾಸಿಗೂ ಯಾರೂ ಬರದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಭಾನುವಾರ ರಾತ್ರಿ ಚಿತ್ರೀಕರಣ ಕ್ಕೆ ತೆರಳಿದ್ದ ಮಾಧ್ಯಮ ದವರಿಗೆ ಪೊಲೀಸರು ಅಡ್ಡಿ ಪಡಿಸಿದರು. ಸಾರ್ವಜನಿಕ ರಸ್ತೆಯಲ್ಲೂ ನಿಲ್ಲಲು ಅವಕಾಶ ನಿರಾಕರಿಸಿದರು. ಈವೇಳೆ ಮಾತಿನ ಚಕಮಕಿಯೂ ನಡೆಯಿತು.

Related posts

Leave a Reply

Your email address will not be published. Required fields are marked *