Header Ads
Header Ads
Breaking News

ಉಡುಪಿ ಅಜ್ಜರಕಾಡುವಿನಲ್ಲಿ ಉದ್ಯೋಗ ಮೇಳಕ್ಕೆ ಕೋಟ ಶ್ರೀನಿವಾಸ ಪೂಜಾರಿಯವರಿಂದ ಉದ್ಘಾಟನೆ.

ವಿಪಕ್ಷ ನಾಯಕ ಉಟುಪಿಯಲ್ಲಿ ಉದ್ಯೋಗ ಮೇಳವು ಉಡುಪಿ ಜಿಲ್ಲಾಡಳಿತ, ಜಿ.ಪಂ., ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಅಜ್ಜರಕಾಡು ಸರಕಾರಿ ಮಹಿಳಾ ಕಾಲೇಜು, ಸಂಚಲನ ಟ್ರಸ್ಟ್, ಉನ್ನತಿ ಕ್ಯಾರಿಯರ್ ಅಕಾಡೆಮಿಯಿಂದ ಅಜ್ಜರಕಾಡು ಮೈದಾನದಲ್ಲಿ ನಡೆಯಲಿದೆ ಎರಡು ದಿನಗಳ ಉದ್ಯೋಗ ಮೇಳ ಕಾಲ ನಡೆಯಲಿದೆ. ಇದರ ಉದ್ಘಾಟನಾ ಸಮಾರಂಭವು ಇಂದು ನಡೆಯಿತು. ಉದ್ಯೋಗ ಮೇಳವನ್ನು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ನಿತ್ಯ ಶಾಸಕರ ಮನೆಗಳಿಗೆ ಉದ್ಯೋಗ ಕೇಳಿಕೊಂಡು ಬರುತ್ತಾರೆ. ಗ್ರಾಮಲೆಕ್ಕಾಧಿಕಾರಿ ನೇಮಕಕ್ಕೆ ಒಂದೆಡೆ ಸಾವಿರಾರು ಅರ್ಜಿಗಳು, ಇನ್ನೊಂದೆಡೆ ಮೆರಿಟ್ ಕಾರಣಗಳನ್ನು ಜಿಲ್ಲಾಧಿಕಾರಿಗಳು ನೀಡುತ್ತಾರೆ. ಜನರೋ ನಮ್ಮಲ್ಲಿ ಬಂದು “ನೀವು ಡಿಸಿಗೆ ಹೇಳಿದರೆ ಆಗುತ್ತದೆಯಂತೆ’ ಎನ್ನುತ್ತಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಅಧ್ಯಕ್ಷ ದಿನಕರಬಾಬು ವಹಿಸಿದ್ದರು. ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ|ರೋಶನ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ವಿಜೇತಾ ಕಾರ್ಯಕ್ರಮ ನಿರ್ವಹಿಸಿದರು. ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ ಭಟ್, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಸೃಷ್ಟಿ ಸ್ಕಿಲ್ಸ್ ಪ್ರೈ.ಲಿ.,ನ ಅಕ್ಷತಾ, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ರಾಮರಾಯ, ಘಟಕದ ಅಧಿಕಾರಿ ಪ್ರೊ|ಶ್ರೀಧರ್ ಭಟ್ ಉಪಸ್ಥಿತರಿದ್ದರು.

Related posts

Leave a Reply