Breaking News

ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವೃದ್ಧ ಸಾವು, ಶವಾಗಾರದಲ್ಲಿ ಹನುಮಂತಪ್ಪ ಮುಳಗುಂದ ಮೃತದೇಹ

ಅಸ್ವಸ್ಥಗೊಂಡ ಅಸಹಾಯಕ ಹಿರಿಯ ನಾಗರಿಕರೊರ್ವರು ಕೊರಂಗ್ರಪಾಡಿ ಬೈಲೂರಿನ ಸಾರ್ವಜನಿಕ ಸ್ಥಳದಲ್ಲಿ ಬಿದ್ದು ಕೊಂಡಿದ್ದರು. ಅವರು ಉಡುಪಿ ಆಸ್ಪತ್ರೆಯಲ್ಲಿ ಸಾವಪ್ಪಿದ್ದಾರೆ.
ಬಿದ್ದಿದ್ದ ಹಿರಿಯರ ಮಾಹಿತಿ ತಿಳಿದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಸ್ಥಳಿಯ ಕಲಾ ಕಿರಣ್ ಕ್ಲಬ್ಬಿನ ಸದಸ್ಯರ ಸಹಕಾರದಿಂದ ಶುಚಿಗೊಳಿಸಿ ಮೇ ೧೭ರ ರಾತ್ರೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ವೃದ್ಧ ಚಿಕಿತ್ಸೆಗೆ ಸ್ಪಂದಿಸಿದೆ ಶುಕ್ರವಾರದ ರಾತ್ರೆ ಮೃತಪಟ್ಟಿದ್ದಾರೆ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ದಾಖಲಿಸುವ ಸಂದರ್ಭ ತನ್ನ ಹೆಸರು ಹನುಮಂತಪ್ಪ, ೭೦ವರುಷ, ಮುಳುಗುಂದ, ಗದಗ ಊರು, ತನಗೆ ಮಹಂತೇಶ ಪರಶುರಾಮ ಎನ್ನುವ ಗಂಡು ಮಕ್ಕಳಿದ್ದಾರೆಂದು ಹೇಳಿಕೊಂಡಿದ್ದಾನೆ.

Related posts

Leave a Reply