Header Ads
Breaking News

ಉಡುಪಿ : ಅನಾಥ ಶವಗಳ ಅಂತ್ಯಸಂಸ್ಕಾರ ನಡೆಸಿದ ಸಾಮಾಜಿಕ ಕಾರ್ಯಕರ್ತರು

ನಾಲ್ಕು ಅನಾಥ ಶವಗಳ ಅಂತ್ಯಸಂಸ್ಕಾರವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ನಗರ ಪೆÇಲೀಸ್ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು, ಅವರ ಸಮಕ್ಷಮದಲ್ಲಿ ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ನಡೆಸಿದರು. ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ, ಗಣೇಶ್, ಸುಮಿತ್ರಾ ರಾವ್ ಅವರು ಸಹಕರಿಸಿದರು. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಅಪರಿಚಿತ ಪುರುಷ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ನಾಲ್ಕು ಶವಗಳನ್ನು ವಾರಸುದಾರರ ಬರುವಿಕೆಗಾಗಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿತ್ತು. ಮಾಧ್ಯಮ ಪ್ರಕಟಣೆ ನೀಡಿ, ಕಾಯುವಿಕೆ ಕಾಲಮಿತಿ ಕಳೆದರೂ ಸಂಬಂಧಿಕರು ಬಾರದೆ ಇರುವುದರಿಂದ, ಉಡುಪಿ ನಗರ ಪೋಲಿಸ್ ಠಾಣೆ ಅವರು, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಸಹಕಾರದ ಮೂಲಕ ಕಾನೂನಿನಂತೆ ಹಿಂದು ರುದ್ರಭೂಮಿಯಲ್ಲಿ ದಫನದ ಮೂಲಕ ಅಂತ್ಯಸಂಸ್ಕಾರ ನಡೆಸಿದರು.

Related posts

Leave a Reply

Your email address will not be published. Required fields are marked *