Header Ads
Header Ads
Breaking News

ಉಡುಪಿ : ಅಭಿನಂದನ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಪಾಕಿಸ್ತಾನ ದೇಶದ ವಶದಲ್ಲಿದ್ದ ಭಾರತೀಯ ವಾಯುಸೇನೆ ಪೈಲಟ್ ವೀರಯೋಧ ಅಭಿನಂದನ್, ಭಾರತದ ಆಗಮಿಸಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು, ಚಿತ್ತರಂಜನ್ ಸರ್ಕಲ್ ಬಳಿ ಹರ್ಷೋತ್ಸವ ಕಾರ್ಯಕ್ರಮವನ್ನು ಆಯೋಜನೆಗೊಳಿಸಿತು. ನೂರಾರು ನಾಗರಿಕರು ಭಾಗಿಯಾಗಿ ’ಭಾರತ್ ಮಾತ ಕೀ ಜೈ’, ’ಅಭಿನಂದನ್ ಕೀ ಜೈ’ ಎಂಬ ಘೋಷಣೆಗಳ ಸಾಮೂಹಿಕವಾಗಿ ಕೂಗಿ ಸಂತೋಷ ವ್ಯಕ್ತಪಡಿಸಿದರು. ನೆರೆದವರೆಲ್ಲರು ಅಭಿನಂದನ್ ಅವರ ಭಾವಚಿತ್ರಕ್ಕೆ ಬೆಳ್ಳಿಯ ತಂಬಿಗೆಯ ಮೂಲಕ ಕ್ಷೀರಾಭಿಷೇಕ ಮಾಡಿದ್ದು ಗಮನ ಸೆಳೆಯಿತು. ನಂತರ ಸಿಹಿ ತಿಂಡಿ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ಬಾಲಗಂಗಾಧರ್ ರಾವ್, ತಾರಾನಾಥ್ ಮೇಸ್ತ ಶಿರೂರು, ಸುಧಾಕರ ಒಳಕಾಡು, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *