Header Ads
Header Ads
Breaking News

ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ ಆರೋಪಿಗಳ ಜಾಮೀನು ಅರ್ಜಿ ತಿರಸ್ಕೃತ

 

ಉಡುಪಿ: ಅನಿವಾಸಿ ಉದ್ಯಮಿ ಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಜಾಮೀನು ಅರ್ಜಿ ಗುರುವಾರ ತಿರಸ್ಕೃತ ಗೊಂಡಿದೆ.

೨೦೧೬ರ ಜುಲೈ ೨೮ರಂದು ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಮಗ ನವನೀತ್ ಶೆಟ್ಟಿ ಸೇರಿ ಕೊಂಡು ಮನೆಯಲ್ಲೇ ಹಿಂಸೆಕೊಟ್ಟು ಕೊಲೆ ಮಾಡಿ, ೨೫ಕಿಲೋ ಮೀಟರ್ ದೂರವಿರುವ ಕಾರ್ಕಳ ನಂದಳಿಕೆಯ ಲ್ಲಿರುವ ನಿರಂಜನ್ ಭಟ್ಟನ ಮನೆಗೆ ಕೊಂಡು ಹೋಗಿ ಅಲ್ಲಿ ನಿರಂಜನ ಭಟ್ ಹೋಮಕುಂಡದಲ್ಲಿ ಭಾಸ್ಕರ ಶೆಟ್ಟಿ ಅವರನ್ನು ಸುಟ್ಟು ಹಾಕಿ ಸುಟ್ಟು ಮೂಳೆ ಹಾಗೂ ಬೂದಿಯನ್ನು ನಂದಳಿಕೆ ಆಸುಪಾಸಿನ ನದಿಗೆ ಎಸೆದಿ ದ್ದರು. ಈ ಬರ್ಬರ ಕೊಲೆ ಉಡುಪಿ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಭೀಕರ ಕೊಲೆ ಪ್ರಕ ರಣದಲ್ಲಿ ಪ್ರಮುಖ ಆರೋಪಿಗಳಾದ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂನಿರಂಜನ್ ಭಟ್ ಹೈಕೋರ್ಟಿಗೆ ಸಲ್ಲಿಸಿದ್ದ ಜಾಮೀನು ತಿರಸ್ಕೃತವಾದ ಬಳಿಕ ಆರೋಪಿಗಳು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಜಾಮೀನು ಕೂಡ ಗುರುವಾರ ತಿರಸ್ಕೃತವಾಗಿದೆ.

ಸೌದಿ ಅರೇಬಿಯಾ ಸೇರಿದಂತೆ ಹಲವೆಡೆ ಉದ್ಯಮ ನಡೆಸುತ್ತಿದ್ದ ಭಾಸ್ಕರ ಶೆಟ್ಟಿ ಅವರು ಉಡುಪಿಯ ದುರ್ಗಾ ಇಂಟರ್ನ್ಯಾಶನಲ್ ಹೊಟೆಲ್ ಮತ್ತಿತರ ಕೆಲ ವ್ಯವಹಾರಗಳನ್ನು ತನ್ನ ಪತ್ನಿ ರಾಜೇಶ್ವರಿ ಶೆಟ್ಟಿಯ ಉಸ್ತುವಾರಿಗೆ ಬಿಟ್ಟಿದ್ದರು. ಭಾಸ್ಕರ ಶೆಟ್ಟಿ ವಿದೇಶಗಳಲ್ಲಿನ ತನ್ನ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಪತ್ನಿಗೆ ವಹಿಸಿರುವ ಉದ್ಯಮದ ವ್ಯವಹಾ ರಗಳಲ್ಲಿ ಪತ್ನಿ ಹಣಕಾಸಿನ ಅವ್ಯವಹಾರ ನಡೆಸಿದ್ದು ಬೆಳಕಿಗೆ ಬಂದ ಬಳಿಕ ಭಾಸ್ಕರ ಶೆಟ್ಟಿ ಊರಿನ ಉದ್ಯಮವನ್ನು ನೋಡಿಕೊಳ್ಳಲು ಹೆಚ್ಚು ಸಮಯ ಇಲ್ಲೇ ಕಳೆಯುತ್ತಿದ್ದರು.
ಪತ್ನಿ ರಾಜೇಶ್ವರಿ ಶೆಟ್ಟಿಗೂ ನಂದಳಿಕೆಯ ಜ್ಯೋತಿಷಿ ನಿರಂಜನ ಭಟ್ಟನಿಗೂ ಸ್ನೇಹ-ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿರುವುದು ಪತ್ನಿ ರಾಜೇಶ್ವರಿ ಶೆಟ್ಟಿ ಮೊಬೈಲ್ ಮೂಲಕ ಗಮನಕ್ಕೆ ಬಂದ ಬಳಿಕ ಭಾಸ್ಕರ ಶೆಟ್ಟಿಯವರು ತೀವ್ರವಾಗಿ ನೊಂದಿದ್ದರು. ಇದೇ ವಿಚಾರದಲ್ಲಿ ಪತ್ನಿ ಮೇಲೆ ಮುನಿಸಿಕೊಂಡ ಭಾಸ್ಕರ ಶೆಟ್ಟಿಯವರು ತನ್ನ ಕೋಟ್ಯಂತರ ರೂಪಾಯಿಯ ಆಸ್ತಿಯಲ್ಲಿ ಚಿಕ್ಕಾಸನ್ನೂ ಕೊಡುವುದಿಲ್ಲ, ಆಸ್ತಿಯನ್ನೆಲ್ಲ ತಾಯಿ ಹೆಸರಿಗೆ ಬರೆದಿಡುತ್ತೇನೆ ಎಂಬ ನಿರ್ಧಾ ರಕ್ಕೆ ಬಂದಿದ್ದರು. ಎಲ್ಲ ಆಸ್ತಿ ತಾಯಿಯ ಹೆಸರಿಗೆ ವಿಲ್ ಮಾಡಿಸ ಬಯಸಿದ್ದರು. ಪತ್ನಿ ರಾಜೇಶ್ವರಿ ಶೆಟ್ಟಿಗೆ ಡಿವೋರ್ಸ್ ನೀಡಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.

ಯಾವಾಗ ಪತಿಯ ಆಸ್ತಿಯಲ್ಲಿ ತನಗೂ ಮಗ ನವನೀತ್ ಶೆಟ್ಟಿಗೂ ಚಿಕ್ಕಾಸು ದೊರೆಯಲಿ ಕ್ಕಿಲ್ಲ ಎಂದು ಅರಿವಾಯಿತೋ ಆಗ ಗಂಡ ಭಾಸ್ಕರ ಶೆಟ್ಟಿಯ ಕೊಲೆಗೈದು, ಸಾಕ್ಷ್ಯನಾಶ ಮಾಡಿಬಿಟ್ಟರೆ ಎಲ್ಲ್ಲಾ ಆಸ್ತಿಯೂ ತನ್ನದಾಗುತ್ತದೆ ಎಂಬ ಲೆಕ್ಕಾಚಾರದಲ್ಲೇ ಜ್ಯೋತಿಷಿ ನಿರಂಜನ ಭಟ್ ಜೊತೆ ಸೇರಿಕೊಂಡು ಭಾಸ್ಕರ ಶೆಟ್ಟಿಯವರ ಕೊಲೆಗೈದರು ಎಂಬ ಭಯಾನಕ ಮಾಹಿತಿ ಬಳಿಕ ಬಹಿರಂಗಗೊಂಡಿತ್ತು.
ಕೊಲೆ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಆರು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳದಿದ್ದರೆ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ಆರೋಪಿ ಗಳಿಗೆ ಸೂಚಿಸಿದೆ. ಸದ್ಯ ಭಾಸ್ಕರ ಶೆಟ್ಟಿ ಕೊಲೆ ಆರೋಪದಲ್ಲಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ಟ ಇನ್ನೂ ಜೈಲಿನಲ್ಲಿದ್ದಾರೆ. ಕಟಪಾಡಿ ಸುಭಾಷ್ ನಗರದವರಾದ ಇಂದ್ರಾಳಿ ನಿವಾಸಿ ಭಾಸ್ಕರ್ ಶೆಟ್ಟಿಯವರು ಮೂವತ್ತು ವರ್ಷಗಳ ಹಿಂದೆಯೇ ವಿದೇಶಕ್ಕೆ ಕೆಲಸಕ್ಕಾಗಿ ತೆರಳಿದ್ದರು. ಅಲ್ಲಿಯೇ ಉದ್ಯಮ ಸ್ಥಾಪಿಸಿ, ಏಳು ಸೂಪರ್ ಮಾರ್ಕೆಟ್ ಸ್ಥಾಪಿಸಿ ಯಶಸ್ಸು ಗಳಿಸಿದ್ದರು. ಉಡುಪಿಯಲ್ಲಿ ದುರ್ಗಾ ಇಂಟರ್ನ್ಯಾಶನಲ್ ಕಟ್ಟಡದ ಮಾಲಕರಾಗಿದ್ದು, ಸಿಟಿ ಬಸ್ ನಿಲ್ದಾಣದ ಬಳಿಯ ಶಂಕರ್ ಬಿಲ್ಡಿಂಗ್ ಕೂಡ ಖರೀದಿಸಿದ್ದರು. ಹಲವು ಉದ್ಯಮಗಳಲ್ಲಿ ಅವರು ಪಾಲು ಹೊಂದಿದ್ದರು. ಶೆಟ್ಟರ ಸಹೋದರರು ಕೂಡ ವಿದೇಶದಲ್ಲಿದ್ದಾರೆ. ಪತ್ನಿ ರಾಜೇಶ್ವರಿ ಪಡುಬಿದ್ರಿಯ ಪ್ರತಿಷ್ಠಿತ ಕುಟುಂಬದವರು. ಮಗ ನವನೀತ್ ಎಂಜಿನಿಯರಿಂಗ್ ಪದವೀಧರನಾಗಿದ್ದು, ಶಂಕರ್ ಬಿಲ್ಡಿಂಗ್‌ನಲ್ಲಿ ಜಿಮ್ ನಡೆಸುತ್ತಿದ್ದ.

ವರದಿ: ಆರ್.ಎ ಲೋಹಾನಿ ಮಂಗಳೂರು

Related posts

Leave a Reply