Header Ads
Header Ads
Breaking News

ಉಡುಪಿ ಎಸ್ಪಿ ಫೋನ್ ಇನ್ ಕಾರ್ಯಕ್ರಮ. ಪುಂಡ ಪೂಕರ ಬಗ್ಗೆ ಅತೀ ಹೆಚ್ಚು ದೂರು. 15 ದಿನದಲ್ಲಿ 253ಪ್ರಕರಣ, 3ಲಕ್ಷ ದಂಡ ಸಂಗ್ರಹ.

ಎಸ್ಪಿ ಕಚೇರಿಯಲ್ಲಿ ಜರಗಿದ “ಪೊಲೀಸ್ ನೇರ ಪೋನ್-ಇನ್’ ಕಾರ್ಯಕ್ರಮದಲ್ಲಿ ಈ ಹಿಂದಿನ ಪೋನ್-ಇನ್ ಗಳಿಗೆ ಹೋಲಿಸಿದರೆ ಗರಿಷ್ಠ ಪ್ರಮಾಣದ ಕರೆಗಳು ಬಂದವು. ಈ ಪೈಕಿ ಹೆಚ್ಚು ದೂರುಗಳು ಸಾರ್ವಜನಿಕ ಸ್ಥಳಗಳಲ್ಲಿ ಪುಂಡ ಪೋಕರಿಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಇದ್ದವು. ಹಲವರು ಈ ಬಗ್ಗೆ ತಮ್ಮ ದೂರುಗಳನ್ನು ತೋಡಿಕೊಂಡರು.ಕೊಕ್ಕರ್ಣೆಯ ವೈನ್ಶಾಪ್ ಮತ್ತು ಕಿರಾಣಿ ಅಂಗಡಿಯ ಪಕ್ಕದಲ್ಲಿ ಕೆಲವು ಮಂದಿ ಯಾವಾಗಲೂ ಹರಟೆ ಹೊಡೆಯುತ್ತಾ ಇರುತ್ತಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ಮಹಿಳೆಯೋರ್ವರು ದೂರಿದರು. ಮಂದಾರ್ತಿ ಕುಕ್ಕಿಕಟ್ಟೆಯ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬರುವ ಸ್ಥಳದ ಪಕ್ಕ ಕೆಲವರ ಉಪಟಳ ಇದೆ. ಅಕ್ರಮ ಮದ್ಯವೂ ಇಲ್ಲಿ ಮಾರಾಟವಾಗುತ್ತಿದೆ ಎಂದು ಇನ್ನೋರ್ವ ಮಹಿಳೆ ಅಲವತ್ತುಕೊಂಡರು. ಸಾಲಿಗ್ರಾಮ ಹಾಳುಕೋಟೆ ಮೈದಾನದ ಬಳಿ ಸಂಜೆಯಿಂದ ರಾತ್ರಿಯ ವರೆಗೂ ಯುವಕರ ಗುಂಪು ಇರುತ್ತದೆ. ವಾಕಿಂಗ್ ಹೋಗುವವರಿಗೂ ತೊಂದರೆಯಾಗುತ್ತಿದೆ. ಅಂಬಾಗಿಲಿನಲ್ಲಿ ರಾತ್ರಿ ಹುಡುಗರು ಸಿಗರೇಟು ಸೇದುತ್ತಾ ಗುಂಪುಗೂಡಿರುತ್ತಾರೆ ಎಂಬ ದೂರುಗಳು ಕೂಡ ಪೋನ್ -ಇನ್ನಲ್ಲಿ ಕೇಳಿ ಬಂದವು. ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವುದಾಗಿ ಎಸ್ಪಿ ದೂರುದಾರರಿಗೆ ಭರವಸೆ ನೀಡಿದರು. ಕೂಡಲೇ ಕಾರ್ಯಾಚರಣೆ ನಡೆಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.ಕಳೆದ 15 ದಿನಗಳ ಅವಧಿಯಲ್ಲಿ ವಾಹನಗಳ ಟಿಂಟೆಡ್ ಗ್ಲಾಸ್ ವಿರುದ್ಧ, ಸೀಟ್ ಬೆಲ್ಟ್ ಅಳವಡಿಕೆ ರಹಿತ ಚಾಲನೆ ಹಾಗೂ ಅನಧಿಕೃತ ನಾಮಫಲಕ ಅಳವಡಿಕೆ ವಿರುದ್ಧದ ಪೊಲೀಸ್ ಕಾರ್ಯಾಚರಣೆಯಲ್ಲಿ ಒಟ್ಟು253 ಪ್ರಕರಣಗಳನ್ನು ದಾಖಲಿಸಿ 3 ಲ.ರೂ. ದಂಡ ಸಂಗ್ರಹಿಸಲಾಗಿದೆ. ಇದರ ಹೊರತಾಗಿ ಮಟ್ಕಾ ಕಾರ್ಯಾಚರಣೆಯಲ್ಲಿ 28 ಪ್ರಕರಣ ದಾಖಲಿಸಿ ೩೦ ಮಂದಿಯನ್ನು ಬಂಧಿಸಲಾಗಿದೆ. ಇಸ್ಪೀಟು, ಜೂಜು ಪ್ರಕರಣದಲ್ಲಿ 21 ಮಂದಿಯನ್ನು, ಅಕ್ರಮ ಮದ್ಯ ಪ್ರಕರಣದಲ್ಲಿ ಓರ್ವರನ್ನು, ಮಾದಕ ದ್ರವ್ಯ ಪ್ರಕರಣದಲ್ಲಿ ೬ ಮಂದಿಯನ್ನು ಬಂಧಿಸಲಾಗಿದೆ. ಕೋಟಾ ಕಾಯಿದೆಯಡಿ169, ಕುಡಿದು ವಾಹನ ಚಾಲನೆ ವಿರುದ್ಧ 47, ಕರ್ಕಶ ಹಾರನ್ಗೆ ಸಂಬಂಧಿಸಿ 295, ಹೆಲ್ಮೆಟ್ ರಹಿತ ಬೈಕ್ ರೈಡ್ ವಿರುದ್ಧ 2862, ಅತಿವೇಗದ ವಾಹನ ಚಾಲನೆ ವಿರುದ್ಧ 107 ಹಾಗೂ ಇತರ ಮೋಟಾರು ವಾಹನ ಕಾಯಿದೆಯಡಿ 6872 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಂತ ಎಸ್ಪಿ ಲಕ್ಷ್ಮಣ ಬಿ.ನಿಂಬರಗಿ ಮಾಹಿತಿ ನೀಡಿದರು.

Related posts

Leave a Reply