Header Ads
Header Ads
Breaking News

ಉಡುಪಿ ಎಸ್ಪಿ ರಾಜಕೀಯ ಒತ್ತಡದ ಕಾರಣಕ್ಕೆ ವರ್ಗಾವಣೆಯಾದ್ರೆ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

 ರಾಜಕೀಯ ಒತ್ತಡದ ಕಾರಣಕ್ಕಾಗಿ ಉಡುಪಿ ಜಿಲ್ಲಾ ಎಸ್ಪಿ ಅವರನ್ನು ವರ್ಗಾವಣೆಗೊಳಿಸಿದರೆ ನಾವು ವಿರೋಧಿಸಲಿದ್ದೇವೆ ಅಂತ ವಿಧಾನಪರಿಷತ್ ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡುದ ಅವರು ರಾಜಕೀಯ ಒತ್ತಡದ ವರ್ಗಾವಣೆಗೆ ನಮ್ಮ ವಿರೋಧವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಸ್‌ಪಿ ಲಾಠಿಚಾರ್ಜ್ ಮಾಡಿದ್ದಾರೆ.ಆಳುವ ಪಕ್ಷ ಹೇಳಿದಂತೆ ಉಡುಪಿ ಎಸ್‌ಪಿ ನಡೆದುಕೊಂಡಿಲ್ಲ.ವರ್ಗಾವಣೆಗೆ ಕಾಂಗ್ರೆಸ್ ನಿಂದ ಒತ್ತಡ ನಡೆಯುತ್ತಿದೆ.

ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿಯವರನ್ನು ವರ್ಗ ಮಾಡಿದರೆ ಬಿಜೆಪಿ ಖಂಡಿಸುತ್ತದೆ..ಮುಖ್ಯಮಂತ್ರಿ ಎಚ್ ಡಿ ಕೆ ಗೂ ಇದೇ ಸಂದೇಶ ರವಾನೆ ಮಾಡಿದ್ದೇನೆ. ಎಸ್ ಪಿಯನ್ನು ಟ್ರಾನ್ಸ್ ಫರ್ ಮಾಡಿದ್ರೆ ಬಿಜೆಪಿ ವಿರೋಧಿಸುತ್ತದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸ್ಪಷ್ಟವಾದ ಮಾತು ಹೇಳಿದ್ದೇವೆ. ಆಡಳಿತಾತ್ಮಕ ದೃಷ್ಟಿಯಿಂದ ವರ್ಗಾವಣೆ ಆಗಲಿ.ವರ್ಗಾವಣೆ ಮಾಡುವುದು ಸರ್ಕಾರದ ಹಕ್ಕು ಸರ್ಕಾರದ ಹಕ್ಕನ್ನು ನಾವು ಪ್ರಶ್ನೆ ಮಾಡುವುದಿಲ್ಲ.ರಾಜಕೀಯ ಪ್ರೇರಿತ ವರ್ಗಾವಣೆ ಮಾಡಿದ್ರೆ ಹೋರಾಟ ಮಾಡುತ್ತೇವೆ ಅಂತ ಸರಕಾರಕ್ಕೆ ಎಚ್ಚರಿಕೆ ನೀಡಿದ್ರು

Related posts

Leave a Reply