Header Ads
Header Ads
Breaking News

ಉಡುಪಿ ಕೃಷ್ಣಮಠದ ಕನಕಗೋಪುರದ ಭಜನಾ ವೇದಿಕೆಯಲ್ಲಿ ಎರಡು ವರ್ಷಗಳಿಂದ ನಿರಂತರ ಭಜನೆ

ಉಡುಪಿ ಕೃಷ್ಣಮಠದ ಕನಕಗೋಪುರದ ಪಕ್ಕದ ಭಜನಾ ವೇದಿಕೆ ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯ್ತು. ಕಳೆದ ಎರಡು ವರ್ಷದಿಂದ ಒಂದು ಕ್ಷಣವೂ ಬಿಡದೆ ದಿನದ 24 ತಾಸು ಭಜನೆ ನಡೆಯುವ ವೇದಿಕೆಯಲ್ಲಿ ಸ್ವತ: ಅಷ್ಟಮಠಾಧೀಶರು ಸಾಮೂಹಿಕ ಭಜನೆ ನಡೆಸಿದರು. ದಿನದ 24 ತಾಸು, ಎರಡು ವರ್ಷಗಳ ಕಾಲ ನಿರಂತರ ಭಜನೆ ನಡೆಸಬೇಕು ಅನ್ನೋದು ಪರ್ಯಾಯ ಪಲಿಮಾರು ಸ್ವಾಮೀಜಿಯ ಆಶಯ. ಅದರಂತೆ ದೇಶದ ನಾನಾಭಾಗಗಳಿಂದ ಬಂದ ತಂಡಗಳು ನಾನ್ ಸ್ಟಾಪ್ ಭಜನಾ ಕಾರ್ಯಕಮ ನೀಡುತ್ತಿವೆ. ಸ್ವತ: ಸ್ವಾಮೀಜಿಗಳೇ ಸಾಮೂಹಿಕವಾಗಿ ಕುಳಿತು ಭಜನೆ ಮಾಡಿದ್ದು ವಿಶಿಷ್ಟ ವಿದ್ಯಮಾನ. ಪರ್ಯಾಯ ಪಲಿಮಾರು ಸ್ವಾಮೀಜಿಯ ಜೊತೆಗೆ ಅದಮಾರು, ಕಾಣಿಯೂರು, ಕೃಷ್ಣಾಪುರ, ಸೋದೆ ಸ್ವಾಮೀಜಿ ಕೃಷ್ಣ ದೇವರನಾಮಗಳನ್ನು ಹಾಡಿದರು. ಕೃಷ್ಣಪೂಜೆ ನಡೆಸುವ ಸ್ವಾಮಿಗಳ ಈ ಭಜನಾ ಆರಾಧನೆಯಿಂದ ಭಕ್ತರು ರೋಮಾಂಚನಗೊಂಡರು.

Related posts

Leave a Reply

Your email address will not be published. Required fields are marked *