Header Ads
Breaking News

ಉಡುಪಿ ಜಿಲ್ಲಾಡಳಿತದಿಂದ ಷರತ್ತುಬದ್ಧ ಬಸ್ ಸಂಚಾರಕ್ಕೆ ಹಸಿರು ನಿಶಾನೆ

ಕಾರ್ಕಳ. ಕರಾವಳಿ ಹಸಿರು ಪ್ರದೇಶದಲ್ಲಿ ಉಡುಪಿ ಜಿಲ್ಲೆ ಯಲ್ಲಿ ಲೊಕ್ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಷರತ್ತುಬದ್ಧ ಬಸ್ ಸಂಚಾರಕ್ಕೆ ಇವತ್ತಿನಿಂದ ಹಸಿರು ನಿಶಾನೆ ತೋರಿಸಿತ್ತು. ಆದರೆ ಇಂದು ಬೆಳಿಗ್ಗೆ ಕೇವಲ 1ಸರಕಾರಿ ಬಸ್ಸು ಉಡುಪಿಯಿಂದ ಕಾರ್ಕಳಕ್ಕೆ 4 ಪ್ರಯಾಣಿಕರನ್ನು ಕರೆತಂದಿತ್ತು. ಉಡುಪಿಗೆ ಹೋಗುವಾಗ ಪ್ರಯಾಣಿಕರು ಇಲ್ಲದೆ ಸಂಚರಿಸುವುದು ಕಂಡುಬಂತು. ಯಾವುದೇ ಖಾಸಗಿ ಬಸ್ಸುಗಳು ರಸ್ತೆ ಯಲ್ಲಿ ಸಂಚರಿಸುವುದು ಕಂಡುಬಂದಿಲ್ಲ. ಕಾರಣ ಸರ್ಕಾರ ಮತ್ತು ಜಿಲ್ಲಾಡಳಿತ ಬಸ್ಸುಗಳ ಮೇಲೆ ಹಾಕಿದ ಕಠಿಣ, ನಿಯಮ ಹಾಗೂ ಷರತ್ ನಿಂದ ಬಸ್ ಮಾಲಕರಿಗೆ ಬಸ್ಸನ್ನು ಓಡಿಸಲು ಸಾಧ್ಯವಿಲ್ಲ ವೆಂದು ಬಸ್ ಏಜೆಂಟರ ಕಾರ್ಯದರ್ಶಿ ಇಕ್ಬಾಲ್ ಮಾಧ್ಯಮಕ್ಕೆ ತಿಳಿಸಿದರು. ಅದಲ್ಲದೆ ರೀಕ್ಷಾ, ಟ್ಯಾಕ್ಸಿಗಳು ಅಂಗಡಿಗಳು, ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು.

Related posts

Leave a Reply

Your email address will not be published. Required fields are marked *