Header Ads
Header Ads
Header Ads
Breaking News

ಉಡುಪಿ ಜಿಲ್ಲಾ ಆಸ್ಪತ್ರೆಗೆ 5 ವಾಟರ್ ಬೆಡ್ ಕೊಡುಗೆ ನಾಗರೀಕ ಸಮಿತಿಯಿಂದ ಹಸ್ತಾಂತರ

 

ಉಡುಪಿ ಜಿಲ್ಲಾ ನಾಗರೀಕ ಸಮಿತಿ , ಜಿಲ್ಲಾ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲಾ ಅಸ್ಪತ್ರೆಗೆ ವಾಟರ್ ಬೆಡ್ ಕೊಡುಗೆಯಾಗಿ ನೀಡಲಾಯಿತು.
ಅತೀ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಕಾರಣ ಹಾಗೂ ಸಾಮಾನ್ಯ ಬೆಡ್ ಗಳಲ್ಲಿ ರೋಗಿಗಳನ್ನು ಮಲಗಿಸಿದರೆ ಗಾಯವಾಗುವ ಸಂಭವ ಹೆಚ್ಚಿರುವ ಕಾರಣ ಇಂತಹ ವಾಟರ್ ಬೆಡ್ ಗಳನ್ನು ಬಳಸಲಾಗುತ್ತದೆ. ರೋಗಿಗಳ ಅನುಕೂಲಕ್ಕಾಗಿ 5 ವಾಟರ್ ಬೆಡ್ ಗಳನ್ನು ಜಿಲ್ಲಾ ನಾಗರೀಕ ಸಮಿತಿಯ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಹಾಗೂ ಲಯನ್ಸ್ ಹಾಗೂ ಲಯನೆಸ್ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ಅವರಿಗೆ ಹಸ್ತಾಂತರಿಸಿದರು.

ಈಗಾಗಲೇ ವಾಟರ್ ಬೆಡನ್ನು ಜಿಲ್ಲಾ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ಆದ್ರೆ ಬೇಡಿಕೆಗೆ ತಕ್ಕಂತೆ ವಾಟರ್ ಬೆಡ್ ಪೂರೈಸುವ ಹಿನ್ನಲೆಯಲ್ಲಿ ಈ ವಾಟರ್ ಬೆಡ್ ಕೊಡುಗೆಯಾಗಿ ನೀಡಲಾಗಿದೆ. ವಾಟರ್ ಬೆಡ್ ಹಸ್ತಾಂತರ ಸಂದರ್ಭದಲ್ಲಿ ಲಯನ್ಸ್ ಹಾಗೂ ಲಯನೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ:ಪಲ್ಲವಿ ಸಂತೊಷ್

Related posts

Leave a Reply