Header Ads
Header Ads
Breaking News

ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ, ವೈದ್ಯರ ದಿನಾಚರಣೆ.

 ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ಇವರ ಆಯೋಜನೆಯಲ್ಲಿ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ ವಿನೂತನ ರೀತಿಯಲ್ಲಿ ಅಜ್ಜರಕಾಡು ಜಿಲ್ಲಾಸ್ಪತ್ರೆ, ಮತ್ತು ಕವಿ ಮುದ್ದಣ ಮಾರ್ಗದಲ್ಲಿ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಶ್ರಯದಲ್ಲಿ ಆಚರಿಸಲಾಯಿತು.ಆಸ್ಪತ್ರೆಯ ಎಲ್ಲಾ ವೈದ್ಯರುಗಳಿಗೆ, ಭೂಮಡಿಲು ಹಸಿರಾಗಿಸುವ ನೆಲೆಯಲ್ಲಿ, ಔಷಧಿ ಸಸ್ಯಗಳನ್ನು ನೀಡಿ, ಸಿಹಿತಿಂಡಿ ವಿತರಿಸಿದರು, ಸಮಿತಿಯ ಪದಾಧಿಕಾರಿಗಳು ವೈದ್ಯರ ದಿನಾಚರಣೆಯ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯ್ಕ್, ಮಹಿಳಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕಿಶೋರಿ, ಹಿರಿಯ ವೈದ್ಯರಾದ ಡಾ.ಕೃಷ್ಣರಾಜ್ ಭಟ್, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಸದಸ್ಯರಾದ ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ, ಹಾಗೂ ಎರಡು ಆಸ್ಪತ್ರೆಯ ಎಲ್ಲಾ ವೈದ್ಯರುಗಳು ಉಪಸ್ಥಿತರಿದ್ದರು

Related posts

Leave a Reply