Header Ads
Header Ads
Header Ads
Breaking News

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಗಣೇಶ್ ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಸರಳೇಬೆಟ್ಟು ನೇಮಕ ಉಡುಪಿ ಬ್ರಹ್ಮಗಿರಿಯಲ್ಲಿ ನಡೆದ ಮಹಾಸಭೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಉದಯವಾಣಿ ಪತ್ರಿಕೆಯ ಉಪಸಂಪಾದಕ ಗಣೇಶ್ ಪ್ರಸಾದ್ ಪಾಂಡೇಲು, ಪ್ರಧಾನ ಕಾರ್ಯದರ್ಶಿಯಾಗಿ ವಿ೪ ನ್ಯೂಸ್‌ನ ವರದಿಗಾರ ಸಂತೋಷ್ ಸರಳೇಬೆಟ್ಟು ನೇಮಕಗೊಂಡಿದ್ದಾರೆ.

ಉಡುಪಿಯ ಬ್ರಹ್ಮಗಿರಿಯ ಐ‌ಎಂಎ ಭವನದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ದಿವಾಕರ್ ಭಂಡಾರಿ, ಜತೆ ಕಾರ್ಯದರ್ಶಿಯಾಗಿ ಮೈಕಲ್ ರೋಡ್ರಿಗಸ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಕಳದ ಕೆ.ಎಂ. ಖಲೀಲ್, ಮುಹಮ್ಮದ್ ಶರೀಫ್ ಆಯ್ಕೆಯಾದರು. ಸಂಘದ ನಿಕಟಪೂರ್ವ ಅಧ್ಯಕ್ಷ ಜಯಕರ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾಧಿಕಾರಿಯಾಗಿ ದಿನೇಶ್ ಕಿಣಿ, ಸಹಾಯಕ ಚುನಾವಣಾಧಿಕಾರಿಯಾಗಿ ಶಶಿಧರ್ ಮಾಸ್ತಿಬೈಲು ಸಹಕರಿಸಿದರು.

Related posts

Leave a Reply