Header Ads
Header Ads
Breaking News

ಉಡುಪಿ ಜಿಲ್ಲಾ ವಾರ್ತಾಧಿಕಾರಿಗೆ ಬೀಳ್ಕೊಡುಗೆ ಸಮಾರಂಭ

ಪದೋನ್ನತಿ ಹೊಂದಿ ಮಂಗಳೂರಿಗೆ ವರ್ಗಾವಣೆಗೊಂಡಿರುವ ಉಡುಪಿ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರಿಗೆ ಬೀಳ್ಗೊಡುಗೆ ಸಮಾರಂಭ ನಡೆಯಿತು. ವಾರ್ತಾ ಇಲಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀಮತಿ ರೋಹಿಣಿ ಅವರನ್ನು ಬೀಳ್ಕೊಡಲಾಯಿತು. ಪ್ರಭಾರ ವರ್ತಾಧಿಕಾರಿ ಖಾದರ್ ಷಾ, ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ಸ್ಮರಣಿಕೆ ನೀಡುವಮೂಲಕ ಬೀಳ್ಕೊಟ್ಟರು.
  ಕಳೆದ ಐದು ವರ್ಷಗಳಲ್ಲಿ ಉಡುಪಿಯಲ್ಲಿಮಾದ್ಯಮದವರಿಂದ, ಇಲಾಖೆಯ ಸಿಬ್ಬಂದಿಗಳಿಂದ ಸಹಕಾರ ಸಿಕ್ಕಿದೆ. ಉಡುಪಿ ಯಲ್ಲಿ ಕೆಲಸ ಮಾಡಿರುವ ಸಂತೃಪ್ತಿ ಇದೆ ಎಂದರು.ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು.

Related posts

Leave a Reply