Header Ads
Header Ads
Breaking News

ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಕುಟುಂಬದವರು ವೈದ್ಯರ ನಡುವೆ ಮಾತಿನ ಚಕಮಕಿ

 ವೃದ್ದರೊಬ್ಬರನ್ನು ಸರ್ಕಾರಿ ಆಸ್ಪತ್ರೆ ವೈಧ್ಯರು ಡಿಸ್ಜಾರ್ಜ್ ಮಾಡಿರೋದಕ್ಕೆ ರೋಗಿಯ ಕುಟುಂಬದವರು ಹಾಗೂ ವೈಧ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಇಂದು ನಡೆದಿದೆ. ಉಡುಪಿಯ ಪಲಿಮಾರಿನ ನಿವಾಸಿ ಸಂಕಪ್ಪ ಎಂಬವರನ್ನು ಕಳೆದ ಮೂರು ದಿನಗಳ ಹಿಂದೆ ಆಕೆಯ ಮಗಳು ಸುಮತಿ ಉಡುಪಿ ನಗರದ ಅಜ್ಜರಕಾಡಿನಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು.

ರೋಗಿಗೆ ಚಿಕಿತ್ಸೆ ಕೊಟ್ಟ ವೈಧ್ಯರು ಗುಣಮುಖರಾಗಿರುವುದನ್ನು ಖಚಿತ ಪಡಿಸಿ ಡಿಸ್ಚಾರ್ಜ್ ಕೂಡ ಮಾಡಿಸಿದ್ರು. ಆದರೆ ಮತ್ತೆ ಹುಷಾರಿಲ್ಲ ಎಂಬ ನೆಪವೊಡ್ಡಿ ಸಂಕಪ್ಪರ ಮಗಳು ತಂದೆಯನ್ನು ಆಸ್ಪತ್ರೆಗೆ ದಾಖಲಿಸಿ ತೆರಳಿದ್ದಾರೆ. ಆದರೆ ಸಂಕಪ್ಪರಿಗೆ ಚಿಕಿತ್ಸೆ ಅಗತ್ಯವಿಲ್ಲದಿರೋದ್ರಿಂದ ವೈಧ್ಯರು ಮತ್ತೆ ಡಿಸ್ಜಾರ್ಜ್ ಮಾಡಿದ್ದಾರೆ. ಇದಕ್ಕೆ ರೋಗಿಯ ಮಗಳು ಆಸ್ಪತ್ರೆಯಲ್ಲೇ ಜಗಳಕ್ಕಿಳಿದಿದ್ದಾರೆ. ಕಾರಣ ಕೇಳಿದ್ರೆ ರೋಗಿಯ ಮಗಳು ತನ್ನ ತಂದೆಗೆ ಹುಷಾರಿಲ್ಲ ವೈಧ್ಯರು ತಿಳಿಸದೆ ಡಿಸ್ಜಾರ್ಜ್ ಮಾಡಿದ್ದಾರೆ ಎಂದ್ರೆ ಆಸ್ಪತ್ರೆ ವೈಧ್ಯರು ಮಾತ್ರ, ತಂದೆಯನ್ನು ಇಲ್ಲಿ ಬಿಟ್ಟು ಹೋಗ್ತಾರೆ. ನೋಡಿಕೊಳ್ಳಲು ನರ್ಸ್ ಪರದಾಡ್ತಾರೆ. ಸಂಕಪ್ಪರಿಗೆ ಏನೂ ಆಗಿಲ್ಲಗಟ್ಟಿಮುಟ್ಟಾಗಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇದೇ ರೋಗಿ ಇತರ ರೋಗಿಗಳಿಗೂ ತೊಂದರೆ ಕೊಡ್ತಿದ್ರು ಎಂದು ಆಸ್ಪತ್ರೆ ವೈಧ್ಯರು ತಿಳಿಸಿದ್ದಾರೆ.

Related posts

Leave a Reply