Header Ads
Header Ads
Breaking News

ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆ

ಕಳೆದು ಒಂದು ವಾರದಿಂದ ನಿರಂತರವಾಗಿ ಉಡುಪಿಯಲ್ಲಿ ಮಳೆ ಮುಂದುವರಿದಿದೆ. ನಿನ್ನೆ ವಿಶ್ರಾಂತಿ ಎಂಬಂತೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಆದರೆ ರಾತ್ರಿ ಶುರುವಾದ ಮಳೆ ಈವರೆಗೂ ಮುಂದುವರಿದೆ.ಉಡುಪಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ.ಬೈಂದೂರು,ಹೆಬ್ರಿ,ಎಣ್ಣೆಹೊಳೆ ಕೊಲ್ಲೂರು ಭಾಗದಲ್ಲಿ ಮಳೆ ಬಿಡುವು ನೀಡದೆ ಸರಿಯುತ್ತಿದೆ.ನಿರಂತರ ಮಳೆಯಿಂದಾಗಿ ಸಮುದ್ರ ಅಬ್ಬರ ಕೊಂಚ ಬಿರುಸುಗೊಂಡಿದೆ.ಮಲ್ಪೆ,ಕಾಪು,ಉದ್ಯಾವರ,ಮಟ್ಟು ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದ ಕಡಲ್ಕೊರೆತ ಮುಂದುವರಿದಿದೆ. ನಾಡದೋಣಿ ಮೀನುಗಾರರರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಜಿಲ್ಲಾದ್ಯಂತ ಮೊಡ ಕವಿದ ವಾತಾವರಣವಿದ್ದು, ದಿನವಿಡೀ ಮಳೆ ಸುರಿಯುವ ಲಕ್ಷಣ ದಟ್ಟವಾಗಿದೆ.ಉತ್ತಮ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಉಡುಪಿ ಜಿಲ್ಲೆ ಕಳೆದ ಮೂರು ದಿನಗಳಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

 

Related posts

Leave a Reply