Header Ads
Header Ads
Breaking News

ಉಡುಪಿ ಜಿಲ್ಲೆಯಲ್ಲಿ ಜೈನ ಸಮುದಾಯದ ಭಕ್ತರಿಂದ ಸಾಂಪ್ರದಾಯಿಕ ‘ದೀಪಾವಳಿ’

ಉಡುಪಿ ಜಿಲ್ಲೆಯಲ್ಲೊಂದು ವಿಶಿಷ್ಟ ಸಂಪ್ರದಾಯ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗ ಗ್ರಾಮದ ಕಲ್ಲುಬಸದಿಯಲ್ಲಿರುವ ನೇಮಿನಾಥ ಸ್ವಾಮಿ, ಪದ್ಮಾವತಿ ಅಮ್ಮನಿಗೆ ಜೈನ ಸಮುದಾಯದ ಭಕ್ತರು ದೀಪಾವಳಿಯ ಬೆಳಕಿನ ಹಬ್ಬದಲ್ಲಿ ತಾವೇ ಕೈಯಾರೆ ಬೆಳೆದ ತರಕಾರಿ, ಹಣ್ಣುಹಂಪಲುಗಳನ್ನ ದೇವರಿಗೆ ಸಮರ್ಪಿಸಿ ಸಾಂಪ್ರದಾಯಿಕ ದೀಪಾವಳಿ ಆಚರಿಸಿದೆ.

ಈ ಸಂಪ್ರದಾಯಕ್ಕೊಂದು ಇಂಟ್ರೆಸ್ಟಿಂಗ್ ಕಹಾನಿ ಇದೆ. ಅದೇನಂದ್ರೆ ವಾಮನ ಅವತಾರದಲ್ಲಿ ವಿಷ್ಣು ಬಲಿಚಕ್ರವರ್ತಿಯನ್ನ ಪಾತಾಳಕ್ಕೆ ತಳ್ಳಿದ್ದ. ಅದಾದ ಬಳಿಕ ಬಲಿಚಕ್ರವರ್ತಿ ದೀಪಾವಳಿ ಸಮಯ ೩ದಿನಗಳ ಕಾಲ ಈ ಭೂಮಿಗೆ ಬರುತ್ತಾನೆ ಎಂಬ ನಂಬಿಕೆಯಿದೆ. ಹೀಗಾಗಿ ಭೂಮಿಗೆ ಬರುವ ಬಲೀಂದ್ರನನ್ನು ಜೈನ ಸಮುದಾಯ ದೀಪ ಬೆಳಗಿ ತಮ್ಮ ಭೂಮಿಯಲ್ಲಿ ತಾವೇ ಬೆಳೆದ ಹಣ್ಣು,ತರಕಾರಿ, ಹೂವು ತಟ್ಟೆಯಲ್ಲಿಟ್ಟು ಅರ್ಗ್ಯ ಕೊಡುವ ಮೂಲಕ ಬಲೀಂದ್ರನನ್ನು ಬರಮಾಡಿಕೊಳ್ತಾರೆ. ಇದು ಅನಾದಿಕಾಲದಿಂದ ನಡೆದುಕೊಂಡು ಬಂದಂತಹ ಈ ವಿಶಿಷ್ಟ ಸಂಪ್ರದಾಯ ಈಗಲೂ ಕಾಣಬಹುದಾಗಿದೆ.

Related posts

Leave a Reply