Header Ads
Breaking News

ಉಡುಪಿ ಜಿಲ್ಲೆಯಲ್ಲಿ ಸ್ವಚ್ಛತ ಶ್ರಮದಾನ : ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ ಪರಿಸರ ಪ್ರಿಯರು

ಉಡುಪಿ ಜಿಲ್ಲೆಯ ಕಾರ್ಕಳದ ಐತಿಹಾಸಿಕ ರಾಮಸಮುದ್ರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿ ಪರಿಸರ ಪ್ರಿಯರು ಅಗಮಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಊರವರ ಶ್ರಮದಾನದ ಫಲವಾಗಿ ಬರೋಬರಿ ೪ ಲೋಡ್ ಟಿಪ್ಪರ್ ತ್ಯಾಜ್ಯವನ್ನು ರಾಮಸಮುದ್ರ ಪರಿಸರದಿಂದ ಸಂಗ್ರಹಿಸಿ ಡಂಪಿಂಗ್ ಯಾರ್ಡ್‌ಗೆ ಸಾಗಿಸಲಾಗಿದೆ. ಕೆರೆಯಲ್ಲಿ ನಾಗನಕಲ್ಲುಗಳು, ಪ್ಲಾಸ್ಟಿಕ್ ಕವರ್‌ಗಳು, ಬಿಸ್ಲೇರಿ ಬಾಟಲ್‌ಗಳು, ಬಿಯರ್ ಬಾಟಲ್,ಬಟ್ಟೆ-ಬರೆಗಳು, ಪಿಂಡ ಪ್ರದಾನಕ್ಕೆ ಉಪಯೋಗಿಸಿದ ಅಸಂಖ್ಯಾತ ಮಡಿಕೆಗಳು, ಕಟ್ಟಿಗೆ, ಕಸಗಳು ಸೇರಿ ಮಲಿನಗೊಂಡಿತ್ತು. ಕಾರ್ಕಳ ಪುರಸಭೆಯ ಸಿಬ್ಬಂದಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು, ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳು, ಮಣಿಪುರ ಗೈಡ್ಸ್ ಸದಸ್ಯರು, ವಿನಾಯಕ ಫ್ರೆಂಡ್ಸ್ ಸದಸ್ಯರು ಸೇರಿದಂತೆ ಸಂಘ ಸಂಸ್ಥೆಗಳೂ ಕೂಡ ರಾಮಸಮುದ್ರ ಸ್ವಚ್ಚತಾ ಕಾರ್ಯದಲ್ಲಿ ಕೈಜೋಡಿಸಿದವು. ಕಾರ್ಕಳದಲ್ಲಿ ಹಿಂದೊಮ್ಮೆ ಶುದ್ಧ ನೀರಿನ ಸೆಲೆಯಾಗಿದ್ದ ರಾಮಸಮುದ್ರ ಇತ್ತೀಚೆಗೆ ತ್ಯಾಜ್ಯದಿಂದ ತುಂಬಿ ಹೋಗಿತ್ತು. ಮುಂಗಾರು ಮಳೆ ವಿಳಂಬ ಹಿನ್ನೆಲೆಯಲ್ಲಿ ಜನರು ನೀರಿನ ಅಭಾವ ಎದುರಿಸುತ್ತಿದ್ದು, ಅಲ್ಲಲ್ಲಿ ಕೆರೆಗಳ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *